ADVERTISEMENT

ಅಡವಿಸಿದ್ಧೇಶ್ವರ ಮಠ: ಆಸ್ಪತ್ರೆಯಲ್ಲೇ ಉತ್ತರಾಧಿಕಾರಿ ಘೋಷಣೆ

ಅಡವಿಸಿದ್ಧೇಶ್ವರ ಮತ್ತು ಇಂದೂಧರೇಶ್ವರ ಮಠ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 0:18 IST
Last Updated 16 ನವೆಂಬರ್ 2024, 0:18 IST
   

ಹುಬ್ಬಳ್ಳಿ: ತಾಲ್ಲೂಕಿನ ಮಂಟೂರಿನ ಅಡವಿಸಿದ್ಧೇಶ್ವರ ಮಠ ಮತ್ತು ಸೊರಬ ತಾಲ್ಲೂಕಿನ ಗೇರೆಕೊಪ್ಪದ ಇಂದೂಧರೇಶ್ವರ ಮಠದ ಪೀಠಾಧಿಪತಿ ಶಿವಲಿಂಗೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ನಗರದ ತತ್ವದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಯೇ ಮಠದ ಉತ್ತರಾಧಿಕಾರಿಯಾಗಿ ಇಂದೂಧರ ದೇವರು ಅವರನ್ನು ಶುಕ್ರವಾರ ಸಾಂಕೇತಿಕವಾಗಿ ಘೋಷಿಸಲಾಯಿತು.

‘82 ವರ್ಷದ ಶಿವಲಿಂಗೇಶ್ವರ ಸ್ವಾಮೀಜಿಯವರಿಗೆ ಐದು ದಿನಗಳ ಹಿಂದೆ ಹೃದಯಾಘಾತವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಭಕ್ತರು ಆತಂಕ ಗೊಳ್ಳದಿರಲಿ ಎಂಬ ಉದ್ದೇಶದಿಂದ ಶಿವಲಿಂಗೇಶ್ವರ ಸ್ವಾಮೀಜಿ ಅವರ ಇಚ್ಛೆಯಂತೆ ಉತ್ತರಾಧಿಕಾರಿಯನ್ನು ಘೋಷಿಸಲಾಗಿದೆ’ ಎಂದು ಮಂಟೂರಿನ ಮಠದ ಭಕ್ತರಾದ ಈರಣ್ಣ ಮಳಗಿ ಮತ್ತು ರೇವಣಸಿದ್ದಯ್ಯ ತಿಳಿಸಿದರು.

‘ಮೈಸೂರಿನ ಸುತ್ತೂರು ಮಠದಲ್ಲಿ ಬಿ.ಎ ಓದುತ್ತಿರುವ ಇಂದೂಧರ ದೇವರಿಗೆ ಕಳೆದ ವರ್ಷವೇ ಪಟ್ಟಾಭಿಷೇಕ ಮಾಡಲು ನಿರ್ಧರಿಸಲಾಗಿತ್ತು. ಸಾಧ್ಯವಾಗಿರಲಿಲ್ಲ. ಹುಬ್ಬಳ್ಳಿ, ಮಂಟೂರು, ಬಮ್ಮಿಗಟ್ಟಿ ಭಕ್ತರ ಸಮ್ಮುಖದಲ್ಲಿ ಈಗ ಘೋಷಣೆ ಪ್ರಕ್ರಿಯೆ ನೆರವೇರಿಸಲಾಗಿದೆ’ ಎಂದು ಸೊರಬ ತಾಲ್ಲೂಕಿನ ಬಿಳವಾಣಿ ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ ಬಿ ತಿಳಿಸಿದರು. ಬೊಮ್ಮನಹಳ್ಳಿ ಮಠದ ಸ್ವಾಮೀಜಿ ಮತ್ತು ಪ್ರಮುಖರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.