ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 36ನೇ ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿಗಳಲ್ಲಿ ಹೆಚ್ಚು ಅಂಕ ಪಡೆದವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಚಿನ್ನದ ಪದಕ ಮತ್ತು ಪ್ರಮಾಣಪತ್ರ ವಿತರಿಸಿದರು.
ಕೃಷಿ ಸ್ನಾತಕ ಪದವಿ (ಬಿ.ಎಸ್ಸಿ ಆನರ್ಸ್) ಕೋರ್ಸ್‌ನಲ್ಲಿ ಚಿತ್ರದುರ್ಗದ ಕೆ.ವಿ. ಅಕ್ಷತಾ ಅವರು 2 ಚಿನ್ನದ ಪದಕ ಪಡೆದರು. ಪದವಿ ಕೋರ್ಸ್‌ನಲ್ಲಿ 9, ಸ್ನಾತಕೋತ್ತರ ಪದವಿಯಲ್ಲಿ 18 ಹಾಗೂ ಪಿಎಚ್.ಡಿಯಲ್ಲಿ 8 ಮಂದಿ ಚಿನ್ನದ ಪದಕ ಪಡೆದರು.
ಇಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವೃಕ್ಷಮಾತೆ ತುಳಸಿಗೌಡ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಬ್ದುಲ್ ಖಾದರ್ ಇಮಾಮ್ ಸಾಬ ನಡಕಟ್ಟಿನ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಪದವಿ ಪ್ರದಾನ: ಪಿಎಚ್.ಡಿ–71, ಸ್ನಾತಕ ಪದವಿ–626, ಸ್ನಾತಕೋತ್ತರ ಪದವಿ–269 ಸೇರಿ ಒಟ್ಟು 966 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.