ADVERTISEMENT

ನವಲಗುಂದ | ತಹಶೀಲ್ದಾರ್ ಕಚೇರಿ ಗುತ್ತಿಗೆ ನೌಕರರಿಂದ ಅಧಿಕಾರ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 15:53 IST
Last Updated 26 ಜೂನ್ 2024, 15:53 IST
ಅಧಿಕಾರ ದುರ್ಬಳಕೆ ಮಾಡಿಕೊಂಡ ನೌಕರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವಲಗುಂದ ತಹಶೀಲ್ದಾರ್ ಕಚೇರಿ ಈಶ್ವರ ಭಜಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು
ಅಧಿಕಾರ ದುರ್ಬಳಕೆ ಮಾಡಿಕೊಂಡ ನೌಕರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವಲಗುಂದ ತಹಶೀಲ್ದಾರ್ ಕಚೇರಿ ಈಶ್ವರ ಭಜಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು   

ನವಲಗುಂದ: ತಹಶೀಲ್ದಾರ್ ಕಚೇರಿಯಲ್ಲಿ ಗುತ್ತಿಗೆ ಆಧಾರಿತ ನೌಕರರಾಗಿರುವ ರವಿ ಕಿರೆಸೂರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಅಧ್ಯಕ್ಷ ಮಾಬುಸಾಬ ಯರಗುಪ್ಪಿ, ರವಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಬುಧವಾರ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಈಶ್ವರ್ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ರವಿ ಕಿರೆಸೂರ ತಹಶೀಲ್ದಾರ್‌ ಕೊಠಡಿಯಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪಿಂಚಣಿಯ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಫಲಾನುಭವಿಗಳಿಂದಲೂ ಹಣ ವಸೂಲಿ ಮಾಡುತ್ತಾರೆ ಎಂಬ ಗಂಭೀರ ಆರೋಪವು ಇವರ ಮೇಲಿದ್ದು, ಈ ಕೂಡಲೇ ಇವರ ಗುತ್ತಿಗೆ ನೇಮಕಾತಿಯನ್ನು ರದ್ದು ಪಡಿಸಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ್, ರಿಯಾಜಅಹ್ಮದ ನಾಶಿಪುಡಿ, ಆಜಾದ ನಾಶಿಪುಡಿ, ಅಲ್ಲಾಭಕ್ಷ ಮುಲ್ಲಾ, ಮೌಲಾಲಿ ಮುಲ್ಲಾ, ಶಾನೂರ ಅಣ್ಣಿಗೇರಿ, ಬುಡ್ನಾಸಾಬ ನಾಶಿಪುಡಿ, ಬಾಬುಶಾ ಮಕಾಂದಾರ, ಅಕ್ಬರ್ ಮುಲ್ಲಾ ಉಪಸ್ಥಿತರಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.