ADVERTISEMENT

ಕಲಘಟಗಿ: ಆಂಬುಲೆನ್ಸ್ ಚಾಲಕರ ತರಾಟೆ

ಸಕಾಲದಲ್ಲಿ ಆಂಬುಲೆನ್ಸ್ ಬಂದಿದ್ದರೆ ಇಬ್ಬರ ಜೀವ ಉಳಿಯುವ ಸಾಧ್ಯತೆ ಇತ್ತು....

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 16:12 IST
Last Updated 31 ಜನವರಿ 2022, 16:12 IST

ಕಲಘಟಗಿ: ತಾಲ್ಲೂಕಿನ ತಂಬೂರ ಕ್ರಾಸ್ ರಾಷ್ಟ್ರಿಯ ಹೆದ್ದಾರಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಜಿಲ್ಲಾ ಆಸ್ಪತ್ರೆಯ ಇಬ್ಬರು ನೌಕರರನ್ನು ಆಸ್ಪತ್ರೆಗೆ ಒಯ್ಯಲು ಸಕಾಲದಲ್ಲಿ ಆಂಬುಲೆನ್ಸ್ ಬಂದಿದ್ದರೆ ಇಬ್ಬರ ಜೀವ ಉಳಿಯುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆಂಬುಲೆನ್ಸ್ ಚಾಲಕರ ತರಾಟೆಗೆ ತೆಗಿದುಕೊಂಡ ವಿಡಿಯೊ ಈಗ ವೈರಲ್ ಆಗಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಜಿಲ್ಲಾ ಆಸ್ಪತ್ರೆಯ ನೌಕರರಾದ ನೂರ್ ಅಹಮದ್ ಮತ್ತು ಜಾವಿದ್ ಪಠಾಣ್ ಸಂಕಟ ಪಡುವುದನ್ನು ಕಣ್ಣಾರೆ ಕಂಡರೂ ದಾರಿಹೋಕರು ನಿಸ್ಸಹಾಯಕರಾಗಿದ್ದರು. ಸರ್ಕಾರಿ ಅಂಬುಲೆನ್ಸ್ ಗೆ ಯಾರೋ ಕರೆ ಮಾಡಿ ಮುಕ್ಕಾಲು ಗಂಟೆಯಾದರೂ ಸ್ಥಳಕ್ಕೆ ಆಂಬುಲೆನ್ಸ್ ಬರದಿರುವುದಕ್ಕೆ ಸ್ಥಳೀಯರು ಅಂಬುಲೆನ್ಸ್ ಚಾಲಕನನ್ನ ತರಾಟೆಗೆ ತೆಗೆದುಕೊಂಡಿರುವುದು ವಿಡಿಯೊದಲ್ಲಿದೆ.

ಹಲವು ನಿಮಿಷಗಳ ಕಾಲ ಇಬ್ಬರೂ ಗಾಯಾಳುಗಳು ಉಸಿರಾಡುತ್ತಿದ್ದರು. ಸಕಾಲಕ್ಕೆ ಆಂಬುಲೆನ್ಸ್ ಬರದಿದ್ದಕ್ಕೆ ಇಬ್ಬರೂ ನರಳಿ ನರಳಿ ಪ್ರಾಣ ಬಿಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇವರಿಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಪಾಡೇ ಹೀಗಾದರೆ ಇನ್ನು ಜನಸಾಮಾನ್ಯರ ಏನು ಮಾಡಬೇಕು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.