ADVERTISEMENT

ನವಲಗುಂದ | ಛಾಯಾಗ್ರಾಹಕರ ಮೇಲೆ ಹಲ್ಲೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 27 ಮೇ 2024, 16:09 IST
Last Updated 27 ಮೇ 2024, 16:09 IST
ಛಾಯಾಗ್ರಾಹಕರ ಮೇಲಿನ ಹಲ್ಲೆ ಖಂಡಿಸಿ ನವಲಗುಂದ ತಾಲ್ಲೂಕು ಫೋಟೊ ಹಾಗೂ ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು
ಛಾಯಾಗ್ರಾಹಕರ ಮೇಲಿನ ಹಲ್ಲೆ ಖಂಡಿಸಿ ನವಲಗುಂದ ತಾಲ್ಲೂಕು ಫೋಟೊ ಹಾಗೂ ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು   

ನವಲಗುಂದ: ವೃತ್ತಿಪರ ಛಾಯಾಗ್ರಾಹಕರ ಮೇಲಿನ ಹಲ್ಲೆ ಖಂಡಿಸಿ ಹಾಗೂ ರಕ್ಷಣೆ ಕೋರಿ ನವಲಗುಂದ ತಾಲ್ಲೂಕು ಫೋಟೊ ಹಾಗೂ ವಿಡಿಯೊಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

‘ಇತ್ತೀಚೆಗೆ ಕಾರ್ಯನಿರತ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿ ಸಲಕರಣೆಗಳನ್ನು ನಾಶ ಮಾಡಿದ್ದಾರೆ. ಇಂತಹ ಘಟನೆಯು ಎಲ್ಲ ವೃತ್ತಿಪರ ಛಾಯಾಗ್ರಾಹಕರ ಮೇಲೆ ತೀವ್ರತರವಾದ ಆಘಾತ ಉಂಟುಮಾಡಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಂಘದ ಅಧ್ಯಕ್ಷ ಸುರೇಶ್ ಬಾಂಡಗೆ, ಕಾರ್ಯದರ್ಶಿ ನಾಗೇಶ್ ದನ್ಮರು, ಸದಸ್ಯರಾದ ಸಿದ್ದು ಬಸಾಪುರ, ಮಂಜುನಾಥ್ ಬಿಜಾಪುರ್, ಮಂಜುನಾಥ್ ಛಲವಾದಿ, ರಾಘವೇಂದ್ರ ರಾಯಬಾಗಿ, ಅಂದಾನಯ್ಯ ಹಿರೇಮಠ, ಶಂಭು ಬಿರೊಳ್ಳಿ, ಆನಂದ್ ಕಾಳೆ, ಮುತ್ತು ಪವಾರ್, ಜಾವಿದ್ ನದಾಫ್, ಜನಾರ್ದನ್ ಬನ್ನಿಕೊಪ್ಪ, ಯಮನೂರು ವಡ್ಡರ್, ಸದಾಶಿವ ನಾಗನೂರು, ಶಿವು ಪೂಜಾರ್, ಮಂಜು ಚಲವಾದಿ, ರಾಕೇಶ್ ಕರಿಗೌಡ, ರಾಚೋಟಿ ಕಾತ್ರಾಳ, ಸಚಿನ್ ಗೊರ್ಲಹೊಸೂರು, ಕುಮಾರ ಪತ್ತಾರ, ಚೇತನ್ ಉಣಕಲ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.