ADVERTISEMENT

ದೇಶ ಹಾಳು ಮಾಡಿದವರಿಗೆ ಭಾರತ ರತ್ನ: ನಾರಾಯಣಾಚಾರ್ಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 9:12 IST
Last Updated 17 ಜುಲೈ 2021, 9:12 IST
ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಸಾಂದರ್ಭಿಕ ಚಿತ್ರ
ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: 'ಕೊಡಬಾರದವರಿಗೆ ಪ್ರಶಸ್ತಿ ನೀಡಿದರೆ ಅದಕ್ಕೆ ಅರ್ಥವಿರುವುದಿಲ್ಲ. ದೇಶ ಹಾಳು ಮಾಡಿದವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಡಾ. ಕೆ.ಎಸ್. ನಾರಾಯಣಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.

ಬುಕ್ ಬ್ರಹ್ಮ ಹಾಗೂ ಸಾಹಿತ್ಯ ಪ್ರಕಾಶನ ಶನಿವಾರ ಆನ್'ಲೈನ್'ನಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಈ ಇಳಿವಯಸ್ಸಲ್ಲಿ ನಾ ಆ ಪ್ರಶಸ್ತಿ ಪಡೆದು ಏನು ಮಾಡೋದು? ನಿಮ್ಮ ಪ್ರಶಸ್ತಿಗಳನ್ನು ನೀವೇ ಇಟ್ಟುಕೊಳ್ಳಿ. ಯಾರು ಚೆನ್ನಾಗಿ ಬರೆಯುತ್ತಾರೋ, ಸರಸ್ವತಿ ಆರಾಧನೆಯಲ್ಲಿ ತೊಡಗಿರುತ್ತಾರೋ ಅವರಿಗೆ ನೀಡಿ. ಆಗ ಪ್ರಶಸ್ತಿಗೆ ಅರ್ಥ ಬರುತ್ತದೆ' ಎಂದರು.

ADVERTISEMENT

ಕಾರ್ಯಕ್ರಮದಲ್ಲಿನಹುಷ, ಊರ್ವಶಿ ಪೂರೂರವ(ಕಾದಂಬರಿ) ಮತ್ತು ಅಗ್ನಿಹೋತ್ರ ತತ್ವ(ಧಾರ್ಮಿಕ) ಕೃತಿಗಳನ್ನುಸಾಹಿತಿ ಬಾಬು ಕೃಷ್ಣಮೂರ್ತಿ ಬಿಡುಗಡೆಗೊಳಿಸಿದರು.ಸಾಹಿತ್ಯ ಪ್ರಕಾಶನದ ಸಂಸ್ಥಾಪಕ ಎಂ.ಎ. ಸುಬ್ರಹ್ಮಣ್ಯ, ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಹರೀಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.