ADVERTISEMENT

ಹುಬ್ಬಳ್ಳಿ: ಬೂತ್‌ ಅಧ್ಯಕ್ಷರೊಂದಿಗೆ ಉಪಾಹಾರ ಸೇವಿಸಿದ ಬಿಜೆಪಿ ನಾಯಕರು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 14:06 IST
Last Updated 4 ಏಪ್ರಿಲ್ 2024, 14:06 IST
ಹುಬ್ಬಳ್ಳಿಯ ಸೆಟ್ಲಮೆಂಟ್‌, ಗಂಗಾಧರ ನಗರದ ವಾರ್ಡ್‌ ನಂಬರ್‌ 81ರ  ಬೂತ್‌ 66ರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.
ಹುಬ್ಬಳ್ಳಿಯ ಸೆಟ್ಲಮೆಂಟ್‌, ಗಂಗಾಧರ ನಗರದ ವಾರ್ಡ್‌ ನಂಬರ್‌ 81ರ  ಬೂತ್‌ 66ರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದ ಸೆಟ್ಲಮೆಂಟ್‌, ಗಂಗಾಧರ ನಗರದ ವಾರ್ಡ್‌ ನಂಬರ್‌ 81ರ  ಬೂತ್‌ 66ರ ಬಿಜೆಪಿ ಅಧ್ಯಕ್ಷ ಶ್ರೀಧರ ಸಿಂಗನಹಳ್ಳಿ ಅವರ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಂಡಲ ಅಧ್ಯಕ್ಷ ಪ್ರಭು ನವಲಗುಂದಮಠ ಹಾಗೂ ಇತರ ಪ್ರಮುಖರು ಭೇಟಿ ನೀಡಿ, ಉಪಾಹಾರ ಸೇವಿಸಿದರು. ಬೂತ್‌ ಮಟ್ಟದ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಸಿಂಗನಹಳ್ಳಿ ಕುಟುಂಬದ ಸದಸ್ಯರು ಹಲವು ವರ್ಷಗಳಿಂದ ಜನಸಂಘದೊಂದಿಗೆ ಇದ್ದಾರೆ. ಈ ಭಾಗದ ಮುಖಂಡರು, ಕಾರ್ಯಕರ್ತರು ಎಲ್ಲರೂ ಸೇರಿ ಪ್ರಚಾರ ಮಾಡಿದರೆ ಬಿಜೆಪಿಗೆ ಹೆಚ್ಚಿನ ಮತಗಳು ಲಭಿಸುವ ವಿಶ್ವಾಸವಿದೆ’ ಎಂದರು.

‘ಈ ಭಾಗದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ನಾನು ಕಳೆದ ನಾಲ್ಕು ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದನಾಗಿದ್ದೇನೆ. ಕಳೆದ ಬಾರಿ ಕೇಂದ್ರ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಅವಳಿ ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದೇನೆ. ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ‘ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಬೂತ್‌ ಮಟ್ಟದ ಅಧ್ಯಕ್ಷರ ಮನೆಗೆ ಭೇಟಿ ನೀಡಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಡಾ.ಕ್ರಾಂತಿ ಕಿರಣ, ಮಾಜಿ ಮೇಯರ್‌ ವೀರಣ್ಣ ಸವಡಿ ಸಂತೋಷ್ ಚವಾಣ್, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ,  ಮುಖಂಡರುಗಳಾದ ಶಶಿ ಬೀಜವಾಡ, ಬಸ್ಸು ಬೀಜವಾಡ, ಪ್ರಕಾಶ್ ಕ್ಯಾರಕಟ್ಟಿ, ಬಸವರಾಜ್ ಅಮ್ಮನಬಾವಿ, ಚಂದ್ರಶೇಖರ್ ಗೋಕಾಕ, ಯಮನೂರು ಜಾದವ್, ಸಂತೋಷ್ ಅರಕೇರಿ, ಅನೋಪ ಬಿಜವಾಡ ,ಮಂಜು ಬಿಜವಾಡ, ಜಗದೀಶ್ ಬಳ್ಳಾನವರ, ವಕ್ತಾರ ರವಿ ನಾಯಕ, ಅಣ್ಣಪ್ಪ ಬಿಜವಾಡ, ಜರ್ತಾರಘರ್, ಲಕ್ಷ್ಮಿಕಾಂತ್ ಗೋಡಕೆ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.