ADVERTISEMENT

ಹುಬ್ಬಳ್ಳಿ | ಬಿಜೆಪಿ ಪ್ರತಿಭಟನೆ: ಅಂಗಡಿ-ಮುಂಗಟ್ಟು ಬಂದ್, ಪೊಲೀಸ್ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 6:44 IST
Last Updated 3 ಜನವರಿ 2024, 6:44 IST
<div class="paragraphs"><p>ಬಿಜೆಪಿ ಪ್ರತಿಭಟನೆ</p></div>

ಬಿಜೆಪಿ ಪ್ರತಿಭಟನೆ

   

ಹುಬ್ಬಳ್ಳಿ: 1992ರ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಬಂಧನದ ಹಿನ್ನೆಲೆಯಲ್ಲಿ ನಗರದ ಶಹರ ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದು, ಮುಂಜಾಗೃತೆ ಕ್ರಮವಾಗಿ ಸುತ್ತಲಿನ ಅಂಗಡಿ-ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.

ಮರಾಠಗಲ್ಲಿ, ಬ್ರಾಡ್ ವೇ, ದುರ್ಗದ ಬೈಲ್ ವೃತ್ತ, ಷಾ ಬಝಾರ್ ಹಾಗೂ ಸುತ್ತಲಿನ ರಸ್ತೆಗಳಲ್ಲಿನ ವ್ಯಾಪಾರ ಮಳಿಗೆಗಳು ಬಂದ್ ಆಗಿವೆ. ಶಹರ ಠಾಣೆ ಎದುರು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ವಾಹನಗಳನ್ನು ಇಟ್ಟು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಠಾಣೆ ಪ್ರವೇಶಿಸದಂತೆ ದಿಗ್ಬಂಧನ ಹಾಕಲಾಗಿದೆ.

ADVERTISEMENT

'ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದ್ದು, ಅಡ್ಡಲಾಗಿ ನಿಲ್ಲಿಸಿರುವ ಪೊಲೀಸ್ ವಾಹನಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ಕಾರ್ಯಕರ್ತರು ವಾಹನ ತೆರವು ಮಾಡಲಿದ್ದಾರೆ' ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಡಿಸಿಪಿಗಳಾದ ರಾಜೀವ್ ಎಂ.,ರವೀಶ್ ಸಿ.ಆರ್. ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಸ್ಥಳದಲ್ಲಿದ್ದಾರೆ. 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.