ಧಾರವಾಡ: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಈಚೆಗೆ ರಾಜ್ಯಮಟ್ಟದ ಶಾಲಾ ಬಾಲಕರ ಮತ್ತು ಬಾಲಕಿಯರ (14 ಮತ್ತು 17 ವರ್ಷದೊಳಗಿನವರು) ಕುಸ್ತಿ ಸ್ಫರ್ಧೆಯಲ್ಲಿ ಕ್ರೀಡಾ ವಸತಿ ನಿಲಯದ ಒಂಬತ್ತು ಕುಸ್ತಿ ಪಟುಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಬ್ಬರು ದ್ವಿತೀಯ ಸ್ಥಾನ ಹಾಗೂ 12 ಕುಸ್ತಿಪಟುಗಳು ತೃತೀಯ ಸ್ಥಾನ ಪಡೆದಿದ್ದಾರೆ.
ಒಟ್ಟು 23 ಪದಕಗಳನ್ನು ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಒಟ್ಟು 24 ಕುಸ್ತಿ ಪಟುಗಳು ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳಿಗೆ ತರಬೇತುದಾರ ಶಿವಪ್ಪ ಪಾಟೀಲ ತರಬೇತಿ ನೀಡಿದ್ದರು.
ಪ್ರಥಮ ಸ್ಥಾನ: ಲೋಕೇಶ ಶಿಂಗ್ರೆ (35 ಕೆ.ಜಿ), ಶ್ರೀಧರ ಘೋರ್ಪಡೆ (44 ಕೆ.ಜಿ), ಸುದೀಪ ನೇಸರಗಿ (51 ಕೆ.ಜಿ), ಚೇತನ ತುಕೋಜಿ (55 ಕೆ.ಜಿ), ಪುಷ್ಪಾ ನಾಯಕ(46 ಕೆ.ಜಿ), ಪ್ರಭಾವತಿ ಲಂಗೋಟಿ (36 ಕೆ.ಜಿ), ಜಾನವಿ ಕೆ (42 ಕೆ.ಜಿ), ಸ್ವಪ್ನಾ ವೈ.(58 ಕೆ.ಜಿ) ಹಾಗೂ ದರ್ಶನ ತಳವಾರ (55 ಕೆ.ಜಿ).
ದ್ವಿತೀಯ ಸ್ಥಾನ: ಅಭಿ ಕುರಬರ(38) ಹಾಗೂ ಆದಮಸಾಬ ಗಲಗಲಿ (60 ಕೆ.ಜಿ)
ತೃತೀಯ ಸ್ಥಾನ: ಮಾದೇಶ ಬತ್ಯೆ (41 ಕೆ.ಜಿ), ಯಂಕಪ್ಪ ಕೂಡಗಿ (45 ಕೆ.ಜಿ), ಆಕಾಶ ಪಾಟೀಲ (48 ಕೆ.ಜಿ), ಭಜರಂಗಿ ದೊಡಮನಿ (48 ಕೆ.ಜಿ), ಶಿವಾಜಿ ಗಾಯಕವಾಡ(60 ಕೆ.ಜಿ), ದಾದಾಪೀರ ಸೈಯದನವರ (57 ಕೆ.ಜಿ),ಬಾಹುಸಾಹೇಬ ಮಾನೆ(71 ಕೆ.ಜಿ), ಅಕ್ಷಯ ದಾನ್ವೇನವರ (62 ಕೆ.ಜಿ), ಸನ್ನಿಧಿ ತೇಲಿ(30 ಕೆ.ಜಿ), ಗಂಗಮ್ಮ ಹಡಪದ(39 ಕೆ.ಜಿ), ಚೈತನ್ಯ ಬಿ.ಎಂ(49 ಕೆ.ಜಿ) ಹಾಗೂ ಅನುಶ್ರೀ ಚೌಗಲೆ (61 ಕೆ.ಜಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.