ADVERTISEMENT

ಬಿಆರ್‌ಟಿಎಸ್‌: 35ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:12 IST
Last Updated 5 ಜುಲೈ 2024, 16:12 IST

ಹುಬ್ಬಳ್ಳಿ: ‘ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸಂಪರ್ಕ ಕಲ್ಪಿಸುವ ತ್ವರಿತ ಬಸ್ ಸಾರಿಗೆ ವ್ಯವಸ್ಥೆಯ (ಬಿಆರ್‌‌ಟಿಎಸ್) ಚಿಗರಿ ಬಸ್‌ನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಅವರ ಅನುಕೂಲಕ್ಕೆ ಹಲವು ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ನಗರ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘2018ರಲ್ಲಿ ಯೋಜನೆ ಅನುಷ್ಠಾನವಾಗಿದ್ದು, 32 ಬಸ್ ನಿಲ್ದಾಣಗಳು ಇವೆ. ಪ್ರತ್ಯೇಕ ಪಥದಲ್ಲಿ ಚಿಗರಿ ಬಸ್‌ ಸಂಚರಿಸುತ್ತವೆ. ಪ್ರಮುಖ ವೃತ್ತಗಳಲ್ಲಿ ಸಂಚಾರಿ ದೀಪಗಳನ್ನು ಅಳವಡಿಸಿದ್ದು, 35ಕ್ಕೂ ಹೆಚ್ಚು ಮಾರ್ಷಲ್‌ಗಳು (ಭದ್ರತಾ ಸಿಬ್ಬಂದಿ) ವಿವಿಧ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2019ರಿಂದ 2024ರ ಜುಲೈ 4ರವರೆಗೆ ಬಿಆರ್‌ಟಿಎಸ್ ಪಥದಲ್ಲಿ 43 ಅಪಘಾತ ಸಂಭವಿಸಿವೆ. 33 ಮಂದಿ ಗಾಯಗೊಂಡಿದ್ದು, 10 ಜನ ಮೃತಪಟ್ಟಿದ್ದಾರೆ‌’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT