ADVERTISEMENT

ಹುಬ್ಬಳ್ಳಿ: ಜನವರಿಯಲ್ಲಿ ಹುಬ್ಬಳ್ಳಿಯಿಂದ ಕಾರ್ಗೊ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 12:40 IST
Last Updated 26 ಸೆಪ್ಟೆಂಬರ್ 2020, 12:40 IST
ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆ ಕಟ್ಟಡದಲ್ಲಿ ನಡೆಯುತ್ತಿರುವ ಕಾರ್ಗೊ ಕಚೇರಿಯ ಕಾಮಗಾರಿ
ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆ ಕಟ್ಟಡದಲ್ಲಿ ನಡೆಯುತ್ತಿರುವ ಕಾರ್ಗೊ ಕಚೇರಿಯ ಕಾಮಗಾರಿ   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ದೇಶದ ಪ್ರಮುಖ ನಗರಗಳಿಗೆ 2021ರ ಜನವರಿಯಿಂದ ವಿಮಾನಯಾನದ ಮೂಲಕ ಕಾರ್ಗೊ ಸೇವೆ ಆರಂಭವಾಗಲಿದೆ.

ಈ ಮೊದಲು ಇದ್ದ ವಿಮಾನ ನಿಲ್ದಾಣದ ಕಚೇರಿಯ ಕಟ್ಟಡದಲ್ಲಿ ಕಾರ್ಗೊ ಕಚೇರಿ ನಿರ್ಮಾಣ ಮಾಡುವ ಕೆಲಸ ಭರದಿಂದ ಸಾಗಿದೆ. ಇದರಿಂದ ಸರಕು ಸೌಲಭ್ಯಗಳನ್ನು ವೇಗವಾಗಿ ಬೇರೆ ಊರುಗಳಿಗೆ ಕಳುಹಿಸಲು, ಬೇರೆ ಊರುಗಳಿಂದ ಇಲ್ಲಿಗೆ ತರಿಸಿಕೊಳ್ಳಲು ಅನುಕೂಲವಾಗಲಿದೆ. ಕಚೇರಿ ನಿರ್ಮಾಣ ಇದೇ ವರ್ಷದ ಡಿಸೆಂಬರ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಹೊಸ ವರ್ಷಕ್ಕೆ ಕಾರ್ಗೊ ಸೌಲಭ್ಯ ಸಿಗಲಿದೆ. ಇದರಿಂದ ಇಲ್ಲಿನ ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ‘ಉತ್ತರ ಕರ್ನಾಟಕ ಭಾಗದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಎಲ್ಲಿಯೂ ಕಾರ್ಗೊ ಸೌಲಭ್ಯಗಳಿಲ್ಲ. ಹೀಗಾಗಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಜಿಲ್ಲೆಯವರು ಗೋವಾ ಅಥವಾ ಬೆಂಗಳೂರಿನ ಮೊರೆ ಹೋಗಬೇಕು. ಆದ್ದರಿಂದ ಈ ಕೆಲಸಕ್ಕೆ ವಿಶೇಷ ಆದ್ಯತೆ ನೀಡಿ ಆದಷ್ಟು ಬೇಗನೆ ಮುಗಿಸಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.