ಬಸವಾಪಟ್ಟಣ: ಇಲ್ಲಿನ ಮುಸ್ಲಿಂ ಸಮುದಾಯದವರು ಪವಿತ್ರ ಹಬ್ಬವಾದ ಈದ್ ಉಲ್ ಫಿತ್ರ್ ಅನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಮುಂಜಾನೆ ನಮಾಜ್ ನಂತರ ಹೊಸ ಉಡುಪುಗಳನ್ನು ಧರಿಸಿ, ಮಸೀದಿಗಳಿಗೆ ತೆರಳಿ, ಅಲ್ಲಿಂದ ಸಂಘಟಿತರಾಗಿ ಪವಿತ್ರ ಈದ್ಗಾ ಮೈದಾನದಲ್ಲಿ ಸೇರಿ ಮೌಲ್ವಿಗಳ ಆದೇಶದಂತೆ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಮೌಲ್ವಿ ಅವರು ಹಬ್ಬದ ಆಚರಣೆ ಮತ್ತು ಉದ್ದೇಶದ ಕುರಿತು ಪ್ರವಚನ ನೀಡಿದರು. ನಂತರ ಪರಸ್ಪರರು ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.