ADVERTISEMENT

ಫೈನಾನ್ಸ್‌ ಕಂಪನಿಗೆ ₹5.47 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 6:13 IST
Last Updated 7 ಜೂನ್ 2023, 6:13 IST
₹36  ಲಕ್ಷ ನಗದು ವಿನಿಮಯದಲ್ಲಿ ವಂಚನೆ; ಅಂಚೆ ಕಚೇರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
₹36 ಲಕ್ಷ ನಗದು ವಿನಿಮಯದಲ್ಲಿ ವಂಚನೆ; ಅಂಚೆ ಕಚೇರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು   

ಹುಬ್ಬಳ್ಳಿ: ಇಲ್ಲಿನ ಜೆಸಿ ನಗರದ ಶ್ರೀರಾಮ ಸಿಟಿ ಯೂನಿಯನ್‌ ಫೈನಾನ್ಸ್‌ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಾಕರ ಜಯರಾಜ ಅವರು, ಗ್ರಾಹಕರು ತುಂಬಿದ ₹5.47 ಲಕ್ಷವನ್ನು ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ವಂಚನೆ ಮಾಡಿದ ಪ್ರಕರಣ ಶಹರ ಠಾಣೆಯಲ್ಲಿ ದಾಖಲಾಗಿದೆ.

ಅರವಿಂದ ನಗರದ ದಿವಾಕರ ಅವರು ಫೈನಾನ್ಸ್‌ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕ, ಶಾಖಾ ಹಿರಿಯ ವ್ಯವಸ್ಥಾಪಕ, ವಿಭಾಗೀಯ ವ್ಯವಸ್ಥಾಪಕ ಮತ್ತು ಪ್ರಾದೇಶಿಕ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಸಣ್ಣ ಮತ್ತು ಮಧ್ಯಮ ವ್ಯಾಪಾರಕ್ಕೆ, ಬೈಕ್‌ ಖರೀದಿಗೆ ಹಾಗೂ ವೈಯಕ್ತಿಕ ಸಾಲವೆಂದು ಗ್ರಾಹಕರಿಗೆ ಬ್ಯಾಂಕ್‌ನಿಂದ ಸಾಲ ನೀಡಿದ್ದರು.

ಸೆಟ್ಲಮೆಂಟ್‌ (ಒಂದೇ ಬಾರಿ) ಮೂಲಕ 15 ಮಂದಿ ಗ್ರಾಹಕರಿಂದ ₹7.09 ಲಕ್ಷ ನಗದು ಹಾಗೂ ಫೋನ್‌ ಮಾಡಿಸಿಕೊಂಡು, ₹1.61 ಲಕ್ಷ ಬ್ಯಾಂಕ್‌ ಖಾತೆಗೆ ತುಂಬಿದ್ದರು. ಉಳಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಗ್ರಾಹಕರಿಗೆ ಕಂಪನಿಯ ಲೆಟರ್‌ ಹೆಡ್‌ನಲ್ಲಿ ಸಾಲ ಮರುಪಾವತಿ ಮಾಡಿರುವುದಕ್ಕೆ ಹಿಂಬರಹ ನೀಡಿದ್ದರು. ಅಲ್ಲದೆ, ತನ್ನ ಪತ್ನಿಗೆ ₹1 ಲಕ್ಷ ವೈಯಕ್ತಿಕ ಸಾಲ ನೀಡಿ ಮರುಪಾವತಿಸದೆ ವಂಚಿಸಿದ್ದಾರೆ ಎಂದು ಕಂಪನಿಯ ಉದ್ಯೋಗಿ ಪ್ರವೀರ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಆರೋಪಿ ಬಂಧನ; ₹2.52 ಲಕ್ಷ ಚಿನ್ನಾಭರಣ ವಶ: ನಗರದ ಕುಸಗಲ್ ರಸ್ತೆಯ ಬೆಳವಣಿಕಿ ಕಾಲೊನಿಯ ಓಂಪ್ರಕಾಶ ಕೆ. ಅವರ ಮನೆ ಬಾಗಿಲು ಮುರಿದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೇಶ್ವಾಪುರ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, ₹2.52 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 53 ಗ್ರಾಂ ಚಿನ್ನಾಭರಣ, 60 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್‌ಸ್ಪೆಕ್ಟರ್‌ ಯು.ಎಚ್‌. ಸಾತೇನಹಳ್ಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

₹2.60 ಲಕ್ಷ ವಂಚನೆ: ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಗಳಿಸಬಹುದು ಎಂದು ಗೋಕುಲ ರಸ್ತೆಯ ಗಾಂಧಿ ನಗರದ ನಿವಾಸಿ ಕಿರಣಕುಮಾರ ಕೆ. ಅವರಿಗೆ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹2.60 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಕಿರಣಕುಮಾರ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿ ಡಿಜಿಟಲ್ ಏಜೆನ್ಸಿ ಇಂಡಿಯಾದಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚು ಲಾಭ ಪಡೆಯಬಹುದು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.