ಗುಡಗೇರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲೆಯ ಗ್ರಾಮಗಳ ವಕ್ಫ್ ಆಸ್ತಿ ಪಟ್ಟಿಯನ್ನು ಗ್ರಾಮ ಪಂಚಾಯಿತಿಗಳಿಗೆ ಕಳಿಸಿ, ಪಂಚಾಯಿತಿಯಲ್ಲಿನ ದಾಖಲೆ ಪರಿಶೀಲಿಸಿ ಮಾಹಿತಿ ನೀಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ತಿಳಿಸಿದೆ.
ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳ (ಮಸೀದಿ, ಮಕಾನ್, ಉರ್ದು ಶಾಲೆ, ಖಬರಸ್ಥಾನ, ದರ್ಗಾ...) ಪಟ್ಟಿಯನ್ನು ಪಂಚಾಯಿತಿಗೆ ಇಲಾಖೆಯಿಂದ ಕಳಿಸಲಾಗಿದೆ. ಆಸ್ತಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಾಖಲಾಗಿವೆಯೇ? ಉತಾರ ನೀಡಲಾಗಿದೆಯೇ ಎಂಬ ಮಾಹಿತಿ ನೀಡಲು ಸೂಚಿಸಲಾಗಿದೆ.
‘ಇಲಾಖೆಯಿಂದ 8 ಆಸ್ತಿ ಪಟ್ಟಿ (ಆಸ್ತಿ ಸಂಖ್ಯೆ, ಆಸ್ತಿ ವಿಧ...) ಕಳಿಸಿದ್ದರು. ಈ ಪೈಕಿ ಆರು ಆಸ್ತಿಗಳ ಸಂಖ್ಯೆ ಸರಿ ಇದೆ. ಬಾಕಿ ಎರಡರ ಬಗ್ಗೆ ಮಾಹಿತಿ ಇಲ್ಲ. ಈ ಎರಡು ಆಸ್ತಿ ಮಾಹಿತಿ ಆಸ್ತಿ ದಫ್ತರ್‌ನಲ್ಲಿ ದಾಖಲಿರುವುದಿಲ್ಲ ಎಂದು ಷರಾದಲ್ಲಿ ನಮೂದಿಸಿದ್ದೇನೆ’ ಎಂದು ಗುಡಗೇರಿ ಪಿಡಿಒ ಬಿ.ಎನ್.ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.