ADVERTISEMENT

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ | ಕರ್ನಾಟಕ, ತಮಿಳುನಾಡು ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 21:54 IST
Last Updated 16 ಅಕ್ಟೋಬರ್ 2024, 21:54 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಹುಬ್ಬಳ್ಳಿ: ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು.

ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ಧಾರಾಕಾರ ಮಳೆ ಸುರಿದಿದ್ದರಿಂದ ಪಂದ್ಯದ ಅಂತಿಮ ದಿನದಾಟ ನಡೆಯಲಿಲ್ಲ. ಹೀಗಾಗಿ ಆತಿಥೇಯ ತಂಡವನ್ನು ಆಲೌಟ್ ಮಾಡಿ ಇನಿಂಗ್ಸ್‌ ಮುನ್ನಡೆ ಗಳಿಸುವ ತಮಿಳುನಾಡು ತಂಡದ ಆಸೆ ಕೈಗೂಡಲಿಲ್ಲ.

ADVERTISEMENT

ಎರಡು ಬಾರಿ ಮೈದಾನವನ್ನು ಪರಿಶೀಲಿಸಿದ‌ ಅಂಪೈರ್‌ಗಳು ಮತ್ತು ರೆಫರಿ, ತೇವ ಆರದ ಕಾರಣ ಮಧ್ಯಾಹ್ನದ ವೇಳೆಗೆ ಪಂದ್ಯ ಡ್ರಾ ಎಂದು ಘೋಷಿಸಿದರು. ಬೋನಸ್ ಪಾಯಿಂಟ್ ಸೇರಿದಂತೆ ಎರಡೂ ತಂಡಗಳು ತಲಾ ಐದು ಪಾಯಿಂಟ್‌ ಪಡೆದವು.

ಕರ್ನಾಟಕ ತಂಡವು ಅಕ್ಟೋಬರ್ 20ರಿಂದ 23ರವರೆಗೆ ಅಗರ್ತಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ತ್ರಿಪುರಾ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ತಮಿಳುನಾಡು 97.2 ಓವರ್‌ಗಳಲ್ಲಿ 312 (ವಿಮಲ್‌ಕುಮಾರ್‌ 82, ರಿತಿಕ್ ಈಶ್ವರನ್‌ 87, ಕೆ.ಟಿ.ಎ.ಮಾಧವ ಪ್ರಸಾದ್‌ 27, ಸನ್ನಿ 24; ಕೆ.ಶಶಿಕುಮಾರ್ 83ಕ್ಕೆ 5, ಪಾರಸ್ ಗುರುಬಕ್ಷ್ ಆರ್ಯ 72ಕ್ಕೆ 4). ಮೊದಲ ಇನಿಂಗ್ಸ್‌: ಕರ್ನಾಟಕ: 13 ಓವರ್‌ಗಳಲ್ಲಿ 3ಕ್ಕೆ 42 (ಮ್ಯಾಕ್ನಿಲ್ ನೊರೊನ್ಹಾ8, ಪ್ರಕರ್ ಚತುರ್ವೇದಿ 4, ವಿಶಾಲ್ ಓನತ್‌ 15; ಸನ್ನಿ 16ಕ್ಕೆ 1, ಗೋವಿಂತ್ 13ಕ್ಕೆ 1, ‍‍ಪಿ.ವಿಗ್ನೇಶ್‌ 3ಕ್ಕೆ 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.