ADVERTISEMENT

ಹುಬ್ಬಳ್ಳಿ: ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:58 IST
Last Updated 2 ಜುಲೈ 2024, 15:58 IST

ಹುಬ್ಬಳ್ಳಿ: ಪ್ರಸಕ್ತ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲಾ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.

ಉದ್ದು, ಕೆಂಪು ಮೆಣಸಿನಕಾಯಿ, ಮುಸುಕಿನಜೋಳ, ಸೋಯಾಅವರೆ, ಹತ್ತಿ, ಹೆಸರು, ಸಾವೆ, ತೊಗರಿ, ಶೇಂಗಾ, ಭತ್ತ, ಜೋಳ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು. ಎಲ್ಲ ಬೆಳೆಗಳಿಗೆ ಜುಲೈ 31ರಒಳಗೆ, ಕೆಂಪುಮೆಣಸಿನಕಾಯಿಗೆ ನೋಂದಣಿ ಮಾಡಿಸಲು ಆಗಸ್ಟ್‌ 16 ಕೊನೆಯ ದಿನ. ನೋಂದಣಿಗೆ ಮಾಡಿಸುವುದು ಫ್ರೂಟ್ಸ್‌ –ಎಫ್‌ಐಡಿ ಕಡ್ಡಾಯ.

ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ಬೆಳೆಸಾಲ ಪಡೆದ ರೈತರು ಬೆಳೆವಿಮೆ ಮಾಡಿಸಲು ಇಚ್ಛಿಸದಿದ್ದರೆ ಬೆಳೆ ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ ಒಂದು ವಾರ ಮೊದಲು ಬ್ಯಾಂಕ್ ವ್ಯವಸ್ಥಾಪಕರಿಗೆ ಮುಚ್ಚಳಿಕೆ ನೀಡಿದರೆ ಅಂತಹ ರೈತರನ್ನು ಕೈಬಿಡಲಾಗುವುದು. ಮಾಹಿತಿಗೆ ವಿಮಾ ಕಂಪನಿ ಪ್ರತಿನಿಧಿ ಬೀರೇಶ ವಡ್ಡರ್‌ (79751 91577) ಅವರನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಮಂಜುಳಾ ತೆಂಬದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.