ADVERTISEMENT

ಉಪ್ಪಿನಬೆಟಗೇರಿ: ಪಹಣಿಯ ಕಾಲಂ 11 ರಲ್ಲಿ ವಕ್ಫ್‌ ಹೆಸರು ಡಿಲೀಟ್  

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:11 IST
Last Updated 12 ನವೆಂಬರ್ 2024, 16:11 IST
ಉಪ್ಪಿನಬೆಟಗೇರಿ ಗ್ರಾಮದ ರೈತ ಮರಬಸಪ್ಪ ಮಸೂತಿ ಮತ್ತು ಸಹೋದರ ಶ್ರೀಶೈಲ ಮಸೂತಿ ಅವರ ಪಹಣಿ ಪತ್ರದಲ್ಲಿ ವಕ್ಫ್‌ ಹೆಸರು ತೆಗೆಯಲಾಗಿದೆ 
ಉಪ್ಪಿನಬೆಟಗೇರಿ ಗ್ರಾಮದ ರೈತ ಮರಬಸಪ್ಪ ಮಸೂತಿ ಮತ್ತು ಸಹೋದರ ಶ್ರೀಶೈಲ ಮಸೂತಿ ಅವರ ಪಹಣಿ ಪತ್ರದಲ್ಲಿ ವಕ್ಫ್‌ ಹೆಸರು ತೆಗೆಯಲಾಗಿದೆ    

ಉಪ್ಪಿನಬೆಟಗೇರಿ: ಗ್ರಾಮದ ರೈತ ಮರಬಸಪ್ಪ ಮಸೂತಿ ಮತ್ತು ಸಹೋದರ ಶ್ರೀಶೈಲ ಮಸೂತಿ ಅವರ ಪಿತ್ರಾರ್ಜಿತ ಆಸ್ತಿಯ ಜಮೀನಿನ ಪಹಣಿ ಪತ್ರದಲ್ಲಿ ದಾಖಲಾದ ವಕ್ಫ್‌ ಹೆಸರು ತೆಗೆಯಲಾಗಿದೆ.

ಮರಬಸಪ್ಪ ಅವರ ಪಹಣಿ ಪತ್ರದ 11ರ ಋಣಗಳ ಕಾಲಂನಲ್ಲಿ ಕೆಲ ವರ್ಷಗಳ ಹಿಂದೆ ವಕ್ಫ್‌ ಹೆಸರು ಸೇರ್ಪಡೆಯಾಗಿತ್ತು. ಈ ಕುರಿತು ತಹಶೀಲ್ದಾರ್, ವಕ್ಪ್ ಕಚೇರಿಗೆ ಅಲೆದಾಡಿದ್ದರು. ಅಲ್ಲದೇ ಹಲವು ಬಾರಿ ಪ್ರತಿಭಟನೆ, ಧರಣಿ, ಹೋರಾಟಗಳು ನಡೆದಿದ್ದವು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಮರಬಸಪ್ಪ ಮಸೂತಿ, ‘ಕೆಲ ವರ್ಷಗಳ ಹಿಂದೆ ಪಿತ್ರಾರ್ಜಿತ ಪಹಣಿಯಲ್ಲಿ ವಕ್ಪ್ ಹೆಸರು ನಮೂದಾಗಿತ್ತು. ತಹಶೀಲ್ದಾರ್‌ ಹತ್ತಿರ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಜಮೀನು ಇನ್ನೊಬ್ಬರ ಪಾಲಾಗುವುದೆಂಬ ಆತಂಕ ಕಾಡುತ್ತಿತ್ತು. ಆದರೀಗ ಮೊಬೈಲ್‌ ಫೋನ್‌ನಲ್ಲಿ ಪರಿಶೀಲಿಸಿದಾಗ ವಕ್ಫ್‌ ಹೆಸರು ತೆಗೆಯಲಾಗಿತ್ತು. ಇನ್ನುಳಿದ ರೈತರ ಪಹಣಿಯನ್ನು ಪರಶೀಲಿಸಿದ್ದೂ, ಅದರಲ್ಲೂ ವಕ್ಫ್‌ ಹೆಸರು ಇಲ್ಲದಿರುವುದು ತೋರಿತು. ಎಲ್ಲರ ಬೆಂಬಲ, ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.