ADVERTISEMENT

ಸಂಶಿ: ಪದವಿಪೂರ್ವ ಕಾಲೇಜು ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜೂನ್ 2023, 14:34 IST
Last Updated 26 ಜೂನ್ 2023, 14:34 IST
   

ಸಂಶಿ (ಗುಡಗೇರಿ): ಕುಂದಗೋಳ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಗ್ರಾಮವಾದ ಸಂಶಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ತೆರೆಯುವಂತೆ ಗ್ರಾಮದ ನಾಗರಿಕರು ಅಂಚೆಯ ಮೂಲಕ ಶಾಸಕರಿಗೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಇಂದಿಗೂ ಯಾರೂ ಸ್ಪಂದಿಸುತ್ತಿಲ್ಲ.

ಮನವಿಯಲ್ಲಿ ಗ್ರಾಮದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ವಸತಿ ಇದ್ದು ಇಲ್ಲಿಎಸ್ಸೆಸ್ಸೆಲ್ಸಿವರೆಗೆ ಮಾತ್ರ ಸರ್ಕಾರಿ ಶಾಲೆಗಳು ಇದ್ದು ಪದವಿ ಪೂರ್ವ ಕಾಲೇಜನ್ನು ತೆರೆದರೆ ಗ್ರಾಮದ ಮಕ್ಕಳಿಗೆ ಹಾಗೂ ಸುತ್ತಲಿನ ಗ್ರಾಮಗಳಾದ ಚಾಕಲಬ್ಬಿ, ಹೊಸಳ್ಳಿ, ಪಶುಪತಿಹಾಳ, ಹಿರೇಹರಕುಣಿ, ಶಿರೂರು, ಬಸಾಪೂರ ಸೇರಿದಂತೆ ಅನೇಕ ಸುತ್ತಮತ್ತಲಿನ ಗ್ರಾಮದ ವಿಧ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಎನ್.ಎಫ್‌.ನದಾಪ, ವಿ.ಡಿ.ಅಕ್ಕಿ.ವಿ.ಡಿ.ಯರಗುಪ್ಪ, ಲೋಕೇಶ ಸರಾವರಿ, ವಿಧ್ಯಾಧರ ಸುಕುಂದ, ಎಲ್.ಬಿ.ದೊಡಮನಿ, ಡಿ.ಬಿ.ದೊಡಮನಿ, ರಾಜು ಪುಟ್ಟಣ್ಣವರ, ಪರಶುರಾಮ ಸೋಲದ ಅವರು ಮನವಿಯಲ್ಲಿ ವಿವರಿಸಿದ್ದಾರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.