ADVERTISEMENT

Dharwad Krishi Mela | ಕೀಟದಿಂದ ಬೆಳೆ ರಕ್ಷಿಸಲು ‘ಸ್ಟಿಕಿ ಟ್ರ್ಯಾಪ್‌’

₹10ರಿಂದ ₹65 ದರದಲ್ಲಿ ಲಭ್ಯ; ಚಿಪ್ಕೊ ಕಂಪನಿ ವಿನ್ಯಾಸ

ಗೌರಮ್ಮ ಕಟ್ಟಿಮನಿ
Published 23 ಸೆಪ್ಟೆಂಬರ್ 2024, 5:22 IST
Last Updated 23 ಸೆಪ್ಟೆಂಬರ್ 2024, 5:22 IST
<div class="paragraphs"><p>ಚಿಪ್ಕೊ ಕಂಪನಿ ವಿನ್ಯಾಸ ಮಾಡಿದ ಗ್ಲಾಸ್‌ ಆಕಾರದ ಟ್ರ್ಯಾಪ್‌ </p></div>

ಚಿಪ್ಕೊ ಕಂಪನಿ ವಿನ್ಯಾಸ ಮಾಡಿದ ಗ್ಲಾಸ್‌ ಆಕಾರದ ಟ್ರ್ಯಾಪ್‌

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ರೈತರು ಬಿಳಿ ನೋಣ, ಗಿಡ ಹೇನು, ಶಿಲೀಂಧ್ರ ಸೇರಿದಂತೆ ಇತರ ಕೀಟಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಲೆಂದು ಪುಣೆಯ ಚಿಪ್ಕೊ ಕಂಪನಿ ವಿವಿಧ ಆಕಾರದ ಸ್ಟಿಕಿ ಟ್ರ್ಯಾಪ್‌ಗಳನ್ನು ವಿನ್ಯಾಸಗೊಳಿಸಿದೆ.

ADVERTISEMENT

ಹಣ್ಣು, ತರಕಾರಿ, ಹೂ ಹಾಗೂ ಇತರ ಬೆಳೆಗಳಿಗೆ ಹೊಂದುವಂತೆ ಗ್ಲಾಸ್, ಮ್ಯಾಕ್ಸ್ ಪ್ಲಸ್, ಇಕೊ ಟ್ರ್ಯಾಪ್, ಡೆಲ್ಟಾ ಟ್ರ್ಯಾಪ್, ವಾಟರ್ ಟ್ರ್ಯಾಪ್‌ಗಳನ್ನು ಹಾಗೂ ಕಾರ್ಡ್‌ಬೋರ್ಡ್‌ನಿಂದ ತಯಾರಿಸಿದ ಎ4 ಅಳತೆಯ ಸ್ಟಿಕಿ ಟ್ರ್ಯಾಪ್‌ಗಳನ್ನು ಬಳಸಬಹುದು.

‘ವಾಟರ್ ಟ್ರ್ಯಾಪ್,  ಗ್ಲಾಸ್, ಮ್ಯಾಕ್ಸ್ ಪ್ಲಸ್, ಇಕೊ ಪ್ಲಸ್ ಟ್ರ್ಯಾಪ್‌ಗಳಲ್ಲಿ ಸಣ್ಣ ರಂಧ್ರ ಮಾಡಲಾಗಿದ್ದು ಹಣ್ಣು, ತರಕಾರಿ ಬೆಳೆಗೆ ತಕ್ಕಂತೆ ಲ್ಯುರೊ (ಕೀಟ ಸೆಳೆಯುವ ಜೆಲ್) ನೇತು ಹಾಕಬೇಕು. ಇದರಿಂದ ಗಿಡದ ಬಳಿ ಬರುವ ಕೀಟಗಳನ್ನು ಜೆಲ್ ಸೆಳೆದು, ಟ್ರ್ಯಾಪ್‌ನಲ್ಲಿ ಬಂದು ಬೀಳುವಂತೆ ಮಾಡುತ್ತವೆ’ ಎನ್ನುತ್ತಾರೆ ಚಿಪ್ಕೊ ಕಂಪನಿಯ ವ್ಯವಸ್ಥಾಪಕ ಪ್ರದೀಪ್.

‘ಹೊಲದಲ್ಲಿ ಇರುವ ಕೀಟಗಳ ಪ್ರಮಾಣಕ್ಕನುಗುಣವಾಗಿ ಇವುಗಳನ್ನು ಅಳವಡಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ಎಕರೆ ಭೂಮಿಗೆ 8-10 ಟ್ರ್ಯಾಪ್‌ಗಳನ್ನು ಹಾಗೂ ಕೀಟಗಳ ಪ್ರಮಾಣ ಹೆಚ್ಚಾಗಿದ್ದಾಗ ಗರಿಷ್ಠ 20 ಟ್ರ್ಯಾಪ್‌ಗಳನ್ನು ಅಳವಡಿಸಬೇಕು. ಇವು ಸಾಮಾನ್ಯವಾಗಿ ಒಂದು ಸೀಸನ್‌ವರೆಗೆ
(ಒಂದು ಬೆಳೆ ಬರುವವರೆಗೆ) ಬಾಳಿಕೆ ಬರುತ್ತವೆ. ಬಿಸಿಲಿನ ತಾಪ ಕಡಿಮೆಯಿದ್ದಾಗ ಅದಕ್ಕಿಂತ ಹೆಚ್ಚು ದಿನ ಬಳಸಬಹುದು’ ಎಂದು ಅವರು ಮಾಹಿತಿ ನೀಡಿದರು.

‘ಪ್ಲಾಸ್ಟಿಕ್‌ನಿಂದ ತಯಾರಿಸಿದ ಟ್ರ್ಯಾಪ್‌ಗಳು ಇವಾಗಿದ್ದು, ₹10ರಿಂದ ₹65 ದರ ನಿಗದಿಪಡಿಸಲಾಗಿದೆ. ಕಾರ್ಡ್‌ಬೋರ್ಡ್‌ ಆಕಾರದ ಟ್ರ್ಯಾಪ್‌ಗಳ ದರ ₹200. ಒಂದು ಸೆಟ್‌ನಲ್ಲಿ 25 ಟ್ರ್ಯಾಪ್‌ಗಳಿರುತ್ತವೆ. ಒಂದು ಎಕರೆ ಭೂಮಿಗೆ ಇದನ್ನ ಬಳಸಬಹುದು. ಹಳದಿ, ನೀಲಿ ಹಾಗೂ ಬಿಳಿ ಬಣ್ಣದಲ್ಲಿ ಇವು ಲಭ್ಯವಿದ್ದು, ಇವು ಕೀಟಗಳನ್ನು ಆಕರ್ಷಿಸುತ್ತವೆ. ಹಾಗೂ ಕಾರ್ಡ್‌ಬೋರ್ಡ್‌ಗೆ ನೈಸರ್ಗಿಕ ಗಮ್‌ ಬಳಸಿರುವುದರಿಂದ ಇದಕ್ಕೆ ಲ್ಯುರ್‌ ಬಳಸುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ವಿವಿಧ ಆಕಾರದ ‌ಟ್ರ್ಯಾಪ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.