ADVERTISEMENT

ಧಾರವಾಡ | ಆಲಿಕಲ್ಲು ಸಹಿತ ಸುರಿದ ಮಳೆ; ತೆಂಗಿನ ಮರಕ್ಕೆ ಬಡಿದ ಸಿಡಿಲು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 11:31 IST
Last Updated 18 ಏಪ್ರಿಲ್ 2024, 11:31 IST
<div class="paragraphs"><p>ಧಾರವಾಡದ ಆಲಿಕಲ್ಲು ಸಹಿತ ಮಳೆ ಗುರುವಾರ ಸುರಿದಿದ್ದು, ಸಿಡಿಲು ಬಡಿತಕ್ಕೆ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ</p></div>

ಧಾರವಾಡದ ಆಲಿಕಲ್ಲು ಸಹಿತ ಮಳೆ ಗುರುವಾರ ಸುರಿದಿದ್ದು, ಸಿಡಿಲು ಬಡಿತಕ್ಕೆ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ

   

ಧಾರವಾಡ: ನಗರದಲ್ಲಿ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ ಸುರಿಯಿತು. ಕಲಘಟಗಿ ತಾಲ್ಲೂಕಿನ ದ್ಯಾವನಕೊಂಡ ಗ್ರಾಮ ಮನೆಯೊಂದರ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಸುಳಿಗೆ ಬೆಂಕಿ ಹೊತ್ತಿ ಉರಿಯಿತು.

ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ಸಹಿತ ವಿವಿಧೆಡೆ ಆಲಿಕಲ್ಲುಗಳು ಉದುರಿದವು. ಸುಮಾರು ಅರ್ಧ ಗಂಟೆ ಮಳೆ ಸುರಿಯಿತು. ಇಳೆಗೆ ತಂಪೆರೆಯಿತು.

ADVERTISEMENT

ಕಲಘಟಗಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಕುಂದಗೋಳ ಪಟ್ಟಣ ಹಾಗೂ ತಾಲ್ಲೂಕಿನ ಅಲ್ಲಾಪುರ, ತರ್ಲಘಟ್ಟ, ಕಮಡೊಳ್ಳಿ, ಯರಿನಾರಾಯಣಪುರ, ಚಾಕಲಬ್ಬಿ, ಶಿರೂರು, ದೇವನೂರು, ಗ್ರಾಮಗಳಲ್ಲಿ ಸಾಧಾರಣ ಮಳೆಯಾಯಿತು. ಚಿಕ್ಕನರ್ತಿ, ಹಿರೇನರ್ತಿ, ಯರಗುಪ್ಪಿ, ಗುಡೇಣಕಟ್ಟಿ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.