ಧಾರವಾಡ: ಮಗನ ಸಾವಿನ ಕುರಿತು ತಾಯಿ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದು, ಹೂತಿದ್ದ ಶವವನ್ನು ಪರೀಕ್ಷೆಗಾಗಿ ಹೊರತೆಗೆಯುವ ಪ್ರಕ್ರಿಯೆ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರಿನ ಸ್ಮಶಾನಗಟ್ಟಿಯಲ್ಲಿ ನಡೆಯುತ್ತಿದೆ.
ಬೆಳಿಗ್ಗೆ 7 ಗಂಟೆಗೆ ಪ್ರಕ್ರಿಯೆ ಶುರುವಾಗಿದೆ. ತಹಶೀಲ್ದಾರ್ ಸುಧೀರ್ ಸಾಹುಕಾರ್, ಪಿಎಸ್‌ಐ ಜನಾರ್ದನ ಭಟ್ರಳ್ಳಿ ಸ್ಥಳದಲ್ಲಿ ಇದ್ಧಾರೆ.
‘ಮಗ ಯಲ್ಲಪ್ಪ (3) ಸಾವು ಸಹಜವಲ್ಲ, ಪಕ್ಕದ ಮನೆಯವರು ಕೊಲೆ ಮಾಡಿರಬಹುದು ಎಂದು ತಾಯಿ ಶಾಂತಾ ಅವರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಇನ್‌ಕ್ವೆಸ್ಟ್ ಪಂಚನಾಮೆ, ಪರೀಕ್ಷೆ ಶವ ಹೊರತೆಗೆಯಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಯಮನೂರಿನ ವೆಂಕಪ್ಪ ಮತ್ತು ಶಾಂತಾ ದಂಪತಿ ಪುತ್ರ ಯಲ್ಲಪ್ಪ (3) ನವೆಂಬರ್ 8 ರಂದು ಮೃತಪಟ್ಟಿದ್ದರು.
‘ಹಿತ್ತಲ ಸಮೀಪ ಆಡುವಾಗ ಕಬ್ಬಿಣದ ಬಂಡ್‌ಫರ್ಮ್ ಬಿದ್ದು ಯಲ್ಲಪ್ಪ ಮೃತಪಟ್ಟಿದ್ದಾಗಿ ಪಕ್ಕದ ಪಕ್ಕದ ಮನೆಯ ನಾಗಲಿಂಗ ಜೋಗಿ ತಿಳಿಸಿದ್ದರು. ಯಲ್ಲಪ್ಪನ ಅಂತ್ಯಸಂಸ್ಕಾರದ ನಂತರ ನಾಗಲಿಂಗ ನಾಪತ್ತೆಯಾಗಿದ್ದಾರೆ. ಹೀಗಾಗಿ, ಮಗನ ಸಾವಿನ ಬಗ್ಗೆ ಸಂಶಯ ಇದ್ದು, ತನಿಖೆ ಮಾಡಬೇಕು’ ಎಂದು ಶಾಂತಾ ಅವರು ದೂರು ನೀಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.