ADVERTISEMENT

ಮುಂಡಗೋಡ | ಅಡಿಕೆ ಬೆಳೆಗೆ ಕೊಳೆರೋಗದ ಆತಂಕ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:39 IST
Last Updated 28 ಜುಲೈ 2024, 15:39 IST
ಮುಂಡಗೋಡ ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ತೋಟದಲ್ಲಿ ಅಡಿಕೆಯು ಉದುರಿ ಬಿದ್ದಿರುವುದು
ಮುಂಡಗೋಡ ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ತೋಟದಲ್ಲಿ ಅಡಿಕೆಯು ಉದುರಿ ಬಿದ್ದಿರುವುದು   

ಮುಂಡಗೋಡ: ಮಳೆಯಿಂದ ಅಡಿಕೆ ಬೆಳೆಗೆ ಕೊಳೆರೋಗ ಕಾಣಿಸಿಕೊಂಡು, ಅಡಿಕೆ ಉದುರುತ್ತಿದೆ.

ತಾಲ್ಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಮಳೆಗೆ ಅಡಿಕೆಗೆ ಕೊಳೆ ರೋಗ ಬಂದಿದೆ. ಕೊಳೆರೋಗ ನಿಯಂತ್ರಣಕ್ಕೆ 2 ರಿಂದ3 ಸಲ ತುತ್ತಸುಣ್ಣ ಸಿಂಪರಣೆ ಮಾಡಿದರೂ, ರೋಗ ನಿಯಂತ್ರಣ ಆಗುತ್ತಿಲ್ಲ. ಅಡಿಕೆ ಉದುರುವುದು ಮುಂದುವರೆದಿದೆ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿದ್ದು, ಸಂಬಂಧಿಸಿದ ಇಲಾಖೆಯವರು ಈ ಕುರಿತು ಪರಿಶೀಲನೆ ಮಾಡಬೇಕು ಎಂದು ಅಡಿಕೆ ಬೆಳೆಗಾರರಾದ ದೇವೇಂದ್ರ ನಾಯ್ಕ ಒತ್ತಾಯಿಸಿದರು.

‘ಸಾಲಸೋಲ ಮಾಡಿ ಅಡಿಕೆ ಬೆಳೆದಿದ್ದು, ಕೈಗೆ ಬಂದ ಫಸಲು ಬಾಯಿಗೆ ಬರದಂತೆ ಆಗಿದೆ. ಈ ಭಾಗದಲ್ಲಿ ಅಡಿಕೆ ಬೆಳೆದಿರುವ ಗೌರಿ ನಾಯ್ಕ, ಫಕ್ಕೀರಪ್ಪ ನಾಯ್ಕ, ಶ್ರೀಪಾದ ಹೆಗಡೆ, ಶ್ರೀನಿವಾಸ ನಾಯ್ಕ, ಅಶೋಕ ನಾಯ್ಕ, ಲಕ್ಷ್ಮಣ ನಾಯ್ಕ, ಪರಮೇಶ್ವರ ನಾಯ್ಕ ಸೇರಿದಂತೆ ಹಲವು ರೈತರು ಅಡಿಕೆ ಕೊಳೆ ರೋಗದಿಂದ ಹಾನಿ ಅನುಭವಿಸಿದ್ದಾರೆ‌’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.