ADVERTISEMENT

ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 4:02 IST
Last Updated 21 ಮಾರ್ಚ್ 2022, 4:02 IST
ಹುಬ್ಬಳ್ಳಿಯ ವಿಕಾಸ ನಗರ ಹಾಗೂ ಶಿವಪುರ ಕಾಲೊನಿಯಲ್ಲಿ ನಾಲಾ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಜಗದೀಶ ಶೆಟ್ಟರ್‌ ಅವರು ಭಾನುವಾರ ಚಾಲನೆ ನೀಡಿದರು
ಹುಬ್ಬಳ್ಳಿಯ ವಿಕಾಸ ನಗರ ಹಾಗೂ ಶಿವಪುರ ಕಾಲೊನಿಯಲ್ಲಿ ನಾಲಾ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಜಗದೀಶ ಶೆಟ್ಟರ್‌ ಅವರು ಭಾನುವಾರ ಚಾಲನೆ ನೀಡಿದರು   

ಹುಬ್ಬಳ್ಳಿ: ‘ವಿಕಾಸ ನಗರದ ಸಿದ್ದಲಿಂಗೇಶ್ವರ ಕಾಲೊನಿ ಹಾಗೂ ಶಿವಪುರ ಕಾಲೊನಿ ಉದ್ಯಾನದ ಸಮೀಪದಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ತಲಾ ₹1 ಕೋಟಿ ವೆಚ್ಚದಲ್ಲಿ ನಾಲಾ ತಡೆಗೋಡೆ ನಿರ್ಮಾಣ ಮತ್ತು ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ವಿಕಾಸ ನಗರ ಹಾಗೂ ಶಿವಪುರ ಕಾಲೊನಿಯಲ್ಲಿ ನಾಲಾ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಪುರದ ಉದ್ಯಾನದಲ್ಲಿ ರಂಗಮಂದಿರ ಬೀಳುವ ಹಂತ ತಲುಪಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ, ವಿನಾಯಕ ಧೋಂಗಡಿ, ದೇವದಾಸ ಹಬೀಬ ಇದ್ದರು.

ADVERTISEMENT

ಉದ್ಯಾನ ಅಭಿವೃದ್ಧಿಗೆ ಆದ್ಯತೆ ನೀಡಿ:

‘ಪಾಲಿಕೆ ವ್ಯಾಪ್ತಿಯ ಉದ್ಯಾನ ನಿರ್ವಹಣೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು. ಉದ್ಯಾನದಲ್ಲಿ ಮಕ್ಕಳಿಗೆ ಆಟವಾಡಲು ಆಟಿಕೆಗಳು ಹಾಗೂ ಹೈಮಾಸ್ಕ್ ದೀಪಗಳನ್ನು ಅಳವಡಿಸಬೇಕು. ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರವಿನಗರದ ಉದ್ಯಾನಕ್ಕೆ ಭಾನುವಾರ ಭೇಟಿ ನೀಡಿದ ಅವರು ವಿವಿಧ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಬೈರಿದೇವರಕೊಪ್ಪದ ರೇಣುಕಾನಗರ ವಾಲ್ಮೀಕಿ ಕಾಲೊನಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ, ಉಣಕಲ್ - ಮ್ಯಾಗೇರಿ ಕಾಲೊನಿಯ ಕಾಂಕ್ರೀಟ್ ರಸ್ತೆ ಕಾಮಗಾರಿ, ಶಿರಡಿ ನಗರದ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಪಾಲಿಕೆ ಸದಸ್ಯರಾದ ಚೇತನ ಭಾರದ್ವಾಡ, ಮಲ್ಲಿಕಾರ್ಜುನ ಗುಂಡೂರ, ಸೀಮಾ ಸಿದ್ದು ಮೊಗಲಿಶೆಟ್ಟರ, ಮುಖಂಡರಾದ ಸುನೀಲ ಕೊರಣಗಿ, ಯೋಗೇಶ ಹಳೆಮಠ, ಬಸವರಾಜ ಹರವಿ, ಸರಸ್ವತಿ ದುಮ್ಮಾಡ, ಲತಾ ಮುಧೋಳ, ಮಹೇಶ ಕೂಡ್ಲಿ,‌ ಪ್ರಕಾಶ ಅಕ್ಕಿ, ಬಸವರಾಜ ಬೆಳ್ಳಕ್ಕಿ, ಸಾವಿತ್ರಿ ಬತ್ತಿ, ಪಂಚು ಪಂಚಾಕ್ಷರಿ, ಮುತ್ತು ಹೆಬ್ಬಳ್ಳಿ, ಶಂಕರ ಗಿಡಮನಿ, ಸದುಮಾಸ್ತರ ವಾಲಿಕಾರ, ಬಸು ಕುರುಬಗಟ್ಟಿ, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಚನ್ನು ಪಾಟೀಲ, ಬಸಣ್ಣ ಹೆಬ್ಬಳ್ಳಿ, ಸಿದ್ದು ಮೊಗಲಿಶೆಟ್ಟರ, ದೊಡ್ಡಯಾ ಹಿರೇಮಠ, ವೆಂಕಟೇಶ ನಿರಗಟ್ಟಿ, ರಾಘವೇಂದ್ರ ಧಾರವಾಡಕರ, ಮೋಹನ ಬಡಿಗೇರ, ಭಾರತಿ ಹಿರೇಗೌಡರ, ಮಾಲಾ ಹಿರೇಮಠ, ಹನುಮಂತ ಜಾಲಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.