ಹುಬ್ಬಳ್ಳಿ: ನಗರದ ಹಿರೇಪೇಟೆಯ ಚಾಟ್ಕೊಂಡಿ ಬಿಲ್ಡಿಂಗ್‌ನಲ್ಲಿರುವ ರಾಹುಲ್ ಪಾಲಿಪ್ಯಾಕ್‌ನಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದ್ದಕ್ಕೆ ಹು–ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ₹20,000 ದಂಡ ವಿಧಿಸಿದ್ದಾರೆ.
ಅಂಗಡಿ ಮೇಲೆ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಹಾಗೂ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಬಳಕೆ ಹಾಗೂ ಮಾರಾಟ ಮಾಡಿದಲ್ಲಿ ಅಂಗಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರೋಗ್ಯ ನಿರೀಕ್ಷಕಿ ದೀಪಿಕಾ ಆರ್., ಸೂಪರ್‌ವೈಸರ್ ಮಂಜುನಾಥ್, ಆನಂದ್, ಬಸವರಾಜ್ ಭಾಗವಹಿಸಿದ್ದರು.
ವಿವಿಧೆಡೆ ವಿದ್ಯುತ್ ವ್ಯತ್ಯಯ ನಾಳೆ
ಹುಬ್ಬಳ್ಳಿ: ನಗರದ ಅಕ್ಷಯ ಕಾಲೊನಿ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಡೆಸುವ ಕಾರಣ ನವೆಂಬರ್ 23ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ?: ಲಕ್ಷ್ಮೀ ನಾರಾಯಣ ನಗರ, ಲಿಡ್ಕರ್ ಕಾಲೊನಿ, ಕ್ಲಾಸಿಕ್ ಲೇಔಟ್, ಟೆಂಗಿನಕಾಯಿ ಲೇಔಟ್, ಲಕ್ಷ್ಮೀ ಕಾಲೊನಿ, ಶಿರೂರು ಪಾರ್ಕ್ ಬ್ಯಾಕ್ ಸ್ಟೇಜ್, ಶಿರೂರು ಪಾರ್ಕ್ 1ನೇ ಸ್ಟೇಜ್, ಪ್ರಭಾತ ಕಾಲೊನಿ, ಪ್ರಗತಿ ಕಾಲೊನಿ, ವಿದ್ಯಾನಗರ, ಚೇತನಾ ಕಾಲೊನಿ, ಜಯನಗರ, ಬೃಂದಾವನ ಲೇಔಟ್, ತಿಮ್ಮಸಾಗರ ಗುಡಿ, ಅಕ್ಷಯ ಕಾಲೊನಿ 1,2,3, ಮತ್ತು 4ನೇ ಫೇಸ್, ತೋಳನಕೆರೆ ಎಚ್.ಟಿ., ರವಿನಗರ, ಶ್ರೇಯಾ ಪಾರ್ಕ್, ಕೆ.ಇ.ಸಿ.ಲೇಔಟ್, ಮಾನಸಗಿರಿ, ಸರಸ್ವತಿಪುರ, ರಾಮಕೃಷ್ಣನಗರ, ರೇಣುಕಾನಗರ, ಗಾಂಧಿ ನಗರ, ಕುಮಾರ ಪಾರ್ಕ್, ನಿಸರ್ಗ ನಗರ, ರಾಘವೇಂದ್ರ ಲೇಔಟ್, ವಿವೇಕಾನಂದ ನಗರ, ಬಸವೇಶ್ವರ ನಗರ, ಪ್ರಸನ್ನ ಕಾಲೊನಿ, ರಾಮಲಿಂಗೇಶ್ವರ ನಗರ, ಸೆಂಟ್ರಲ್ ಎಕ್ಸ್‌ಚೇಂಜ್ ಕಾಲೊನಿ, ಗಣೇಶ ಕಾಲೊನಿ, ಸನ್ಮಾರ್ಗ ನಗರ, ಅಶೋಕ ವನ, ಕಲಬಂಡಿ ಲೇಔಟ್, ರಾಧಾಕೃಷ್ಣ ನಗರ, ಗುರುನಾಥ ಲೇಔಟ್, ಬಸವೇಶ್ವರ ನಗರ, ಮಂಜುನಾಥ್ ನಗರ ಕ್ರಾಸ್, ಅಕ್ಷಯ ಪಾರ್ಕ್, 10ನೇ ಅವಿನ್ಯೂ, ರೈಲ್ ನಗರ, ಸೂರಿ ನಗರ, ರಾಜೀವ್ ನಗರ, ಓಂ ನಗರ, ಸ್ವರ್ಣಗಿರಿ ಲೇಔಟ್, ಹೆಬ್ಬಳ್ಳಿ ಬಡಾವಣೆ, ಶಿವಗಿರಿ ಪಾಟೀಲ ಲೇಔಟ್, ಲಿಂಗರಾಜ ನಗರ, ವೀರಭದ್ರೇಶ್ವರ ಕಾಲೊನಿ, ಶಕ್ತಿ ಕಾಲೊನಿ, ಶೆಟ್ಟರ್ ಲೇಔಟ್, ಸಿದ್ದಪ್ಪಾಜಿ ಗುಡಿ, ರಾಜೀವ್ ನಗರ, ಕಾಳಿದಾಸ ನಗರ, ಮಿತ್ರ ವಿಶಾಲ ಪಾರ್ಕ್, ಸಿದ್ದೇಶ್ವರ ಪಾರ್ಕ್, ಶಿರೂರು ಪಾರ್ಕ್ ಮುಖ್ಯರಸ್ತೆ, ನೇಕಾರ ಭವನ, ನೇಕಾರ ಕಾಲೊನಿ, ವಿದ್ಯಾವನ ಕುಮಾರ್ ಪಾರ್ಕ್, ಭಾಗ್ಯಲಕ್ಷ್ಮೀ ನಗರ, ಪ್ರಶಾಂತ್ ಕಾಲೊನಿ, ಲಿಂಗರಾಜ ನಗರ ಮುಖ್ಯರಸ್ತೆ, ಮಹಾಲಕ್ಷ್ಮೀ ನಗರ, ಚಂದ್ರಗಿರಿ ಲೇಔಟ್, ಆಶಾನಗರಿ ಲೇಔಟ್, ನಿವೇದಿತಾ ಲೇಔಟ್ ಹಾಗೂ ಸುತ್ತಲಿನ ಪ್ರದೇಶಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.