ಅಳ್ನಾವರ: ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಅವರ ಜನಪರ ಕಾರ್ಯಗಳು ಶ್ಲಾಘನೀಯ ಎಂದು ಮಿಲ್ಲತ್ ಆಸ್ಪತ್ರೆ ಸಮಿತಿ ಅಧ್ಯಕ್ಷ ಎಂ.ಎಂ. ತೇಗೂರ ಹೇಳಿದರು.
ಸಂತೋಷ್ ಲಾಡ್ ಪ್ರಾಯೋಜಕತ್ವ
ದಲ್ಲಿ ಜನರ ಕಣ್ಣು ತಪಾಸಣೆಗಾಗಿ ವಿನ್ಯಾಸ
ಗೊಳಿಸಿದ ವಿಶೇಷ ಬಸ್‌ನಲ್ಲಿ ಇಲ್ಲಿನ ನೆಹರೂ ನಗರ ಬಡಾವಣೆಯ ಮಿಲ್ಲತ್ ಆಸ್ಪತ್ರೆ ಆವರಣದಲ್ಲಿ ಕಣ್ಣು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಶಿಬಿರದಲ್ಲಿ 213 ಜನರ ತಪಾಸಣೆ ನಡೆಯಿತು. ಅಗತ್ಯ ಇರುವವರಿಗೆ ಉಚಿತ
ವಾಗಿ ಕನ್ನಡಕ ವಿತರಣೆ ಮಾಡಲಾಗು
ವುದು ಹಾಗೂ ಶಸ್ತ್ರಚಿಕಿತ್ಸೆ ಸಹ ನಡೆಸಲಾಗುವುದು’ ಎಂದು ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ ತಿಳಿಸಿದರು.
ಹುಬ್ಬಳ್ಳಿಯ ಐ ಕೇರ್ ದೃಷ್ಟಿ ಕೇಂದ್ರದ ಡಾ. ಮಾಲತೇಶ, ಡಾ. ಬಿ. ನಕ್ಷತ್ರ, ಜಿ. ಪಾರ್ಥಸಾರ್ಥಿ, ಕೆ.ಸುವರ್ಣಾ, ಶಬಾ ಪೂಲುಸ್ ತಪಾಸಣೆ ನಡೆಸಿದರು. ಹಸನಅಲಿ ಶೇಖ್, ಅನ್ವರಖಾನ ಬಾಗೇವಾಡಿ, ಮೆಹಮೂದ್ ಬಾಗವಾನ್, ಮುಕ್ತುಂ ಹುದಲಿ, ಬಿ.ಡಿ. ದಾಸ್ತಿಕೊಪ್ಪ, ಸತ್ತಾರ ಬಾತಖಂಡಿ, ಡಾ. ಚೇತನ, ಆಕಾಶ ಜನಕಾಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.