ADVERTISEMENT

ದ್ವೇಷಭಾಷಣ ಆರೋಪ: ಫಕೀರ ದಿಂಗಾಲೇಶ್ವರ ಶ್ರೀ ವಿರುದ್ಧ ಎಫ್ಐಆರ್

ಧರ್ಮದ ಹೆಸರಿನಲ್ಲಿ ದ್ವೇಷಭಾಷಣ: ದೂರು

​ಪ್ರಜಾವಾಣಿ ವಾರ್ತೆ
Published 4 ಮೇ 2024, 23:32 IST
Last Updated 4 ಮೇ 2024, 23:32 IST
ಫಕೀರ ದಿಂಗಾಲೇಶ್ವರ ಸ್ವಾಮೀಜಿ
ಫಕೀರ ದಿಂಗಾಲೇಶ್ವರ ಸ್ವಾಮೀಜಿ   

ನವಲಗುಂದ: ಇಲ್ಲಿನ ಗಾಂಧಿ ಮಾರುಕಟ್ಟೆಯಲ್ಲಿ ಮೇ 2ರಂದು ನಡೆದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳ ವಿರುದ್ಧ ದೂರು ದಾಖಲಾಗಿದೆ.

ಜಾತಿ, ಸಮುದಾಯ, ಧರ್ಮದ ಹೆಸರಲ್ಲಿ ವಿವಿಧ ಸಮುದಾಯಗಳ ನಡುವೆ ವೈರತ್ವ ಮತ್ತು ದ್ವೇಷ ಭಾವ ಉಂಟು ಮಾಡುವ ಹೇಳಿಕೆ ನೀಡಿದ್ದಾರೆ ಎಂದು ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಉದ್ಯೋಗಿ ಆಗಿರುವ ಆರ್. ಕುಮಾರಸ್ವಾಮಿ ಎಂಬುವವರು ನವಲಗುಂದ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ.

‘ಪ್ರಲ್ಹಾದ ಜೋಶಿ ಅವರು ತಮ್ಮ ಜಾತಿಯವರನ್ನು ಪ್ರೀತಿ ಮಾಡಿದಷ್ಟು ಬೇರೆ ಯಾವ ಜಾತಿಯವರನ್ನೂ ಪ್ರೀತಿಸುವುದಿಲ್ಲ. ನಿಮ್ಮ ಲಿಂಗಾಯತ ಜಾತಿಯವರಿಗೆ ಫೋನ್ ಮಾಡ್ರಿ, ನಮಗೆ ಮಾಡಬ್ಯಾಡಿ ಅಂತ ಹೇಳುವ ಈ ಪಾಪಿಯನ್ನು ಹೊರಗೆ ಹಾಕುವವರೆಗೆ ನಮಗೆ ಸಮಾಧಾನ ಇಲ್ಲಾ ಎಂದು ನುಡಿದಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಮೊದಲು ಎಲ್ಲ ಜಾತಿಯವರು ಭಸ್ಮ ಹಚಗೊತಿದ್ದರು, ಭಸ್ಮ ಹೋಗಿ ಕುಂಕುಮ ಬಂತು; ಸುಮ್ಮನ ಇದ್ದವಿ. ಬಂಢಾರ ಹೋಗಿ ಕುಂಕುಮ ಬಂತು ಸುಮ್ಮನ ಇದ್ದವಿ. ನಮಸ್ಕಾರ ಹೋಗಿ, ಶರಣು ಶರಣಾರ್ಥಿ ಹೋಗಿ, ಹರಿ ಓಂ, ಜೈಶ್ರೀರಾಮ್ ಬಂತು, ಸುಮ್ಮನೆ ಇದ್ದವಿ. ಏನೇನೆಲ್ಲಾ ನೋಡಿ ಸುಮ್ಮನೆ ಇದ್ದರೂ ಯಾವ ಹಂತಕ್ಕೆ ಬಂತು ಅಂದರ, ನಾವು ಬದುಕೇನೂ ಉಪಯೋಗಿಲ್ಲಾ, ಈ ನಾಡಿನೊಳಗ ಈ ಸಮಾಜದೊಳಗ ಹುಟ್ಟಿ ಉಪಯೋಗಿಲ್ಲಾ ಅನ್ನು ಕೆಟ್ಟ ಪರಿಸ್ಥಿತಿ ಬಂದ ಮ್ಯಾಲ ಇವತ್ತಿನ ದಿವಸ ಅನಿವಾರ್ಯವಾಗಿ ಹೊರಗೆ ಬಂದಿವಿ ಅಂತಾ ಎಂದು ಹೇಳಿದ್ದರು’ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.