ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ಇಂಡಿಪಂಪ್‌ನಲ್ಲಿ ಶನಿವಾರ ರಾತ್ರಿ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುವಾಗ ದಿಢೀರನೆ ಹೊತ್ತಿಕೊಂಡ ಬೆಂಕಿ ಸುತ್ತಮುತ್ತಲಿನ ಜನರಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿತ್ತು.
ವಾಹನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವಾಹನಪೂರ್ತಿ ಆವರಿಸಿಕೊಂಡಿತು. ಪೆಟ್ರೋಲ್ ಬಂಕ್‌ನಲ್ಲಿಯೇ ಈ ಘಟನೆ ನಡೆದ ಕಾರಣ ಜನ ಕೂಡ ಆತಂಕಕ್ಕೆ ಒಳಗಾದರು. ಬಂಕ್‌ನ ಅಕ್ಕಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ದಿಕ್ಕಾಪಾಲಾಗಿ ಓಡಿದರು.
ಬಂಕ್‌ನ ಸಿಬ್ಬಂದಿ, ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಹೆಸ್ಕಾಂ ಸಿಬ್ಬಂದಿ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಇಂಡಿಪಂಪ್ ಸುತ್ತಲಿನ ವಾತಾವರಣ ಕತ್ತಲುಮಯವಾಗಿತ್ತು. ಈ ಘಟನೆಯಲ್ಲಿ ವಾಹನ ಸುಟ್ಟು ಕರಕಲವಾಗಿದ್ದು, ವಾಹನದಲ್ಲಿದ್ದವರು ಹೊರಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.