ADVERTISEMENT

ಹುಬ್ಬಳ್ಳಿ: ಪೊಲೀಸ್‌ ವೇಷದಲ್ಲಿ ವಿಡಿಯೊ; ₹1.15 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:14 IST
Last Updated 5 ಜುಲೈ 2024, 16:14 IST

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಮಹಾಂತೇಶ ಮೆಣಸಿನಕಾಯಿ ಅವರಿಗೆ ವ್ಯಕ್ತಿಯೊಬ್ಬ, ಪೊಲೀಸ್ ಅಧಿಕಾರಿ ವೇಷದಲ್ಲಿ ವಿಡಿಯೊ ಕಾಲ್ ಮಾಡಿ ಬೆದರಿಸಿ, ₹1.15 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಮಹಾಂತೇಶ ಅವರಿಗೆ ಕರೆ ಮಾಡಿದ ವ್ಯಕ್ತಿ, ಆಧಾರ್‌ ಕಾರ್ಡ್‌ಗೆ ಲಿಂಕ್ ಇರುವ ಮೊಬೈಲ್ ನಂಬರ್ ಬ್ಲಾಕ್ ಮಾಡುವುದಾಗಿ ಹೇಳಿದ್ದಾನೆ. ಯಾಕೆ ಎಂದು ಪ್ರಶ್ನಿಸಿದಾಗ ಪೊಲೀಸ್‌ ಇಲಾಖೆ ಅಧಿಕಾರಿಗಳು ಕರೆ ಮಾಡುತ್ತಾರೆ ಎಂದು ಹೇಳಿದ್ದಾನೆ. ನಂತರ ಪೊಲೀಸ್ ಅಧಿಕಾರಿ ವೇಷದಲ್ಲಿರುವ ಅವರ ವಾಟ್ಸ್‌ಆ್ಯಪ್‌ ನಂಬರ್‌ಗೆ ಕರೆ ಮಾಡಿದ ವ್ಯಕ್ತಿ, ‘ಲಕ್ನೋದಲ್ಲಿ ಬ್ಯಾಂಕ್ ಖಾತೆ ತೆರೆದು ಕಾನೂನು ಬಾಹಿರವಾಗಿ ಹಣದ ಮೂಲ ಮರೆಮಾಚುತ್ತಿದ್ದೀರ’ ಎಂದು ಬೆದರಿಸಿ, ಸಹಾಯ ಮಾಡುವ ನೆಪದಲ್ಲಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹13 ಲಕ್ಷ ವಂಚನೆ: ಧಾರವಾಡದ ಕಮಲಾಪುರ ಬಾಳಿ ಓಣಿಯ ಕಾರ್ತಿಕ ಸಾಲಿ ಅವರಿಗೆ ಕರೆ ಮಾಡಿದ ವ್ಯಕ್ತಿ, ಖೇಲೋ ಡಾಟ್ ಕಾಂ.ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ, ₹13.05 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಚಿನ್ನಾಭರಣ ಕಳವು: ಗೋಕುಲ್ ರಸ್ತೆಯ ಶಿವನಗರದಲ್ಲಿರುವ ರಾಘವ ಅವರ ಮನೆ ಬಾಗಿಲಿನ ಬೀಗ ಮುರಿದು ₹30 ಸಾವಿರ ನಗದು ಸೇರಿ ಒಟ್ಟು ₹5.01 ಲಕ್ಷ ವೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲ್ಯಾಪ್‌ಟಾಪ್ ಕಳವು: ಬೆಂಗಳೂರು ಗಾಂಧಿದಾಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಿಲೋಕಸಿಂಹ ಡಾಂಗಿ ಅವರ ಎರಡು ಲ್ಯಾಪ್‌ಟಾಪ್, ನಗದು ಸೇರಿ ಒಟ್ಟು ₹1.62 ಲಕ್ಷ ವೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.