ಹುಬ್ಬಳ್ಳಿ: 7ನೇ ವೇತನ ಆಯೋಗದ ಶಿಫಾರಸ್ಸನ್ನು 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್, ಹಿಮಾಚಲ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲೂ ಎನ್‌ಪಿಎಸ್ ರದ್ದುಪಡಿಸಬೇಕು. ಸರ್ಕಾರಿ ಶೀಘ್ರ ಕ್ರಮ ವಹಿಸದಿದ್ದರೆ ರಾಜ್ಯದ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ, ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗಂಗಾಧರ್ ಕಂದಕೂರ್, ಸಂಘದ ಗ್ರಾಮೀಣ ಘಟಕದ ಅಧ್ಯಕ್ಷ ಪ್ರಹ್ಲಾದ್ ಗೆಜ್ಜಿ, ಉಪಾಧ್ಯಕ್ಷ ಪ್ರಣವ ಹೊಸಳ್ಳಿ, ಪ್ರಮೋದ ಶಿವಳ್ಳಿ, ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಸ್. ಹುಬ್ಬಳ್ಳಿ, ಪ್ರಚಾರ ಕಾರ್ಯದರ್ಶಿ ವಿನೋದಕುಮಾರ ಡಿ., ಕಾರ್ಯದರ್ಶಿ ಎಫ್.ಸಿ. ಹುಣಸಿ, ಮಂಜುನಾಥ ಜಂಗಳಿ, ಖಜಾಂಚಿ ನಾರಾಯಣ ಬದ್ನಿ ಇದ್ದರು.
ಸಭೆ ಇಂದು: ಹುಬ್ಬಳ್ಳಿ ಗ್ರಾಮೀಣ ಸರ್ಕಾರಿ ನೌಕರರ ಸಭೆಯನ್ನು ಫೆ.24 ರಂದು ಸಂಜೆ 5 ಗಂಟೆಗೆ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.