ADVERTISEMENT

ಗಡಿಗ್ರಾಮ ಉಮರಜ ಪ್ರೌಢಶಾಲೆ ದುಸ್ಥಿತಿ: ಕಾಮಗಾರಿ ಅಪೂರ್ಣ, ಹಣ ದುರ್ಬಳಕೆ ಆರೋಪ

ಅಲ್ಲಮಪ್ರಭು ಕರ್ಜಗಿ
Published 28 ಸೆಪ್ಟೆಂಬರ್ 2024, 5:39 IST
Last Updated 28 ಸೆಪ್ಟೆಂಬರ್ 2024, 5:39 IST
<div class="paragraphs"><p>ಶಾಲಾ ಕಂಪೌಂಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವದು.</p></div>

ಶಾಲಾ ಕಂಪೌಂಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವದು.

   

ಚಡಚಣ: ತಾಲ್ಲೂಕಿನ ಉಮರಜ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕೂಡಲೇ ಪೂರ್ಣಗೊಳಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ ಭೂಪಾಳಿ,  ಶಾಲಾ ಕಂಪೌಂಡ, ಆಟದ ಮೈದಾನ ಹಾಗೂ ಶೌಚಾಲಯ ನಿರ್ಮಾಣಕ್ಕೆ ₹ 56 ಲಕ್ಷ ಮಂಜೂರಾತಿ ದೊರಕಿದೆ. ಈ ಎಲ್ಲ ಕಾಮಗಾರಿಗಳನ್ನು ಅರ್ಧಕ್ಕೆ ನಿಂತಿವೆ.

ADVERTISEMENT

ಶಾಲಾ ಕಂಪೌಂಡ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದೇ ಇರುವುದರಿಂದ ಶಾಲೆಯ 4 ಎಕರೆ 8 ಗುಂಟೆ ನಿವೇಶನದ ಅರ್ಧದಷ್ಟು ಸ್ಥಳವನ್ನು ಸಾರ್ವಜನಿಕರು ಅತಿಕ್ರಮಿಸಕೊಂಡಿದ್ದಾರೆ. ಶಾಲಾ ಆವರಣದಲ್ಲಿ ದನಕರುಗಳನ್ನು ಕಟ್ಟಲಾಗುತ್ತಿದೆ. ಶಾಲಾ ಆವರಣದಲ್ಲಿಯೇ ರಾಶಿ, ಶೌಚ, ಮದ್ಯ ಸೇವನೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಎಲ್ಲ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿರುವದನ್ನು ನೋಡಿದರೇ ಅದರ ಹಿಂದೆ ಹಣ ಲಪಟಾಯಿಸಿದ ವಾಸನೆ ಎದ್ದು ಕಾಣುತ್ತಿದೆ ಎಂದು ಆರೋಪಸಿದ್ದಾರೆ.

ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಪಿಡಿಒ ಎಲ್.ಎಫ ನದಾಫ, ‘ಆಟದ ಮೈದಾನಕ್ಕೆ ₹ 16.5 ಲಕ್ಷ ಮಂಜೂರಾತಿ ದೊರಕ್ಕಿದ್ದು, ಎನ್‌ಅರ್‌ಇಜಿ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕೊಕ್ಕೊ, ಕಬಡ್ಡಿ, ವಾಲಿಬಾಲ್‌, ಬಾಸ್ಕೆಟ್‌ ಬಾಲ್‌ ಅಂಗಳ, ರನ್ನಿಂಗ್‌ ಟ್ರ್ಯಾಕ್‌ ನಿರ್ಮಾಣದ ಕಾರ್ಯ ಶೇ 75 ರರ್ಷು ಪೂರ್ಣಗೊಂಡಿವೆ. ಕಾಮಗಾರಿಗೆ ತಕ್ಕಂತೆ ₹ 12 ಲಕ್ಷ ಹಣವನ್ನು ಗುತ್ತಿಗೆದಾರರಿಗೆ, ಕಾರ್ಮಿಕರಿಗೆ ಬಿಡುಗಡೆಗೊಳಿಸಲಾಗಿದೆ. ಆವರಣ ನಿರ್ಮಾಣಕ್ಕೆ ₹ 32 ಲಕ್ಷ ಮಂಜೂರಾಗಿದೆ. ಕಂಪೌಂಡ್‌ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಅದರಲ್ಲಿ ಶೇ 30 ರಷ್ಟು ಹಣ ಬಿಡುಗಡೆಯಾಗಿದೆ. ವಿದ್ಯಾರ್ಥಿನಿಯರ ಶೌಚಾಲಯಕ್ಕೆ ₹ 8 ಲಕ್ಷ ಹಣ ಮಂಜೂರಾತಿ ದೊರಕಿದ್ದು, 2 ಶೌಚಾಲಯ ನಿರ್ಮಿಸಲಾಗಿದೆ. ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಸುಮಾರು ₹ 5 ಲಕ್ಷ ಹಣ ಬಿಡುಗಡೆಗೊಳಿಸಲಾಗಿದೆ. ಬಾಕಿ ಬಿಲ್‌ ತಡೆ ಹಿಡಿಯಲಾಗಿದೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹಣ ಲಪಟಾಯಿಸಲಾಗಿದೆ ಎಂಬ ಅರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅರ್ಧಕ್ಕೆ ನಿಂತಿರುವ ಶಾಲಾ ಆಟದ ಮೈದಾನ

ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ಪ್ರೌಢಶಾಲೆ ಅಭಿವೃದ್ಧಿಗೆ ವಿವಿಧ ಕಾಮಗಾರಿ ಪ್ರಗತಿಯಲ್ಲಿವೆ. ಶೀಘ್ರ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ
–ಕೆವೆಸನ್‌ ಸಾವಳೆ, ಅಧ್ಯಕ್ಷ ಗ್ರಾಮ ಪಂಚಾಯಿತಿ ಉಮರ್ಜಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.