ADVERTISEMENT

ಗುರುನಾನಕ್ ಜಯಂತಿ: ಗುರುದ್ವಾರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:30 IST
Last Updated 15 ನವೆಂಬರ್ 2024, 16:30 IST
ಗುರುನಾನಕ್ ಜಯಂತಿ ಅಂಗವಾಗಿ ಹುಬ್ಬಳ್ಳಿ ದೇಶಪಾಂಡೆ ನಗರದ ಗುರುದ್ವಾರಕ್ಕೆ ಸಿಖ್ಖರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು
ಗುರುನಾನಕ್ ಜಯಂತಿ ಅಂಗವಾಗಿ ಹುಬ್ಬಳ್ಳಿ ದೇಶಪಾಂಡೆ ನಗರದ ಗುರುದ್ವಾರಕ್ಕೆ ಸಿಖ್ಖರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು   

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಗುರುದ್ವಾರದ ಗುರುಸಿಂಗ್ ಸಭಾಭವನದಲ್ಲಿ ಗುರುವಾರ ಗುರುನಾನಕ್‌ ಜಯಂತಿ ಆಚರಿಸಲಾಯಿತು.

ಗುರುದ್ವಾರವನ್ನು ವಿವಿಧ ಬಗೆಯ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗುರುದ್ವಾರಕ್ಕೆ ಬೆಳಿಗ್ಗೆಯಿಂದ ರಾತ್ರಿವರೆಗೂ ಅಪಾರ ಸಂಖ್ಯೆಯಲ್ಲಿ ಸಿಖ್ಖರು ಭೇಟಿ ನೀಡಿ ಪ್ರಾರ್ಥಿಸಿದರು. ‘ಗುರು ಗ್ರಂಥ ಸಾಹೇಬ್‌’ ಧರ್ಮಗ್ರಂಥಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದರು.

ಜಯಂತಿ ಅಂಗವಾಗಿ ನ.10ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನ.15ರಂದು ಪಂಜಾಬ್‌ ಅಮೃತಸರದ ಹಿರ್ದೇಜಿತ್ ಸಿಂಗ್ ಅವರು ಗುರುನಾನಕ್ ಅವರ ಕುರಿತು ಕಥೆ ವಾಚಿಸಿದರು. ಗುರುವಂತ್‌ ಸಿಂಗ್‌ ಅವರು ಕೀರ್ತನೆ ಹಾಡಿದರು. ಇದಕ್ಕೂ ಮುನ್ನ ಕವಿ ದರ್ಬಾರ್ ಹಾಗೂ ಸಂಗೀತ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.