ಹುಬ್ಬಳ್ಳಿ: ಹುಬ್ಬಳ್ಳಿ–ಮೈಸೂರು ನಡುವೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್ ರೈಲಿನ ಎರಡೂ ಮಾರ್ಗದಲ್ಲಿ ಡಿ. 13 ಹಾಗೂ 14ರಂದು ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಈ ರೈಲು ಹುಬ್ಬಳ್ಳಿಯಿಂದ ತೆರಳುವಾಗ ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರ, ಅರಸೀಕೆರೆ, ತುಮಕೂರು, ಯಶವಂತಪುರ ಮಾರ್ಗದಲ್ಲಿ ತೆರಳಲಿದೆ. ಮೊದಲು ಗುಂತಕಲ್, ಧರ್ಮಾವರಂ, ಪೆನುಕೊಂಡ, ಹಿಂದುಪುರ, ಗೌರಿಬಿದನೂರ, ದೊಡ್ಡಬಳ್ಳಾಪುರ ಮತ್ತು ಯಲಹಂಕ ಮಾರ್ಗದ ಮೂಲಕ ತೆರಳುತ್ತಿತ್ತು.
ವಿಸ್ತರಣೆ: ವಾಸ್ಕೋಡಗಾಮ ಹಾಗೂ ಜೈಸಿದಿಹ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು 2022ರ ಜನವರಿ 28ರ ತನಕ ಹಾಗೂ ಜೈಸಿದಿಯ್‌ನಿಂದ–ವಾಸ್ಕೋಡಗಾಮಕ್ಕೆ ತೆರಳುವ ಸಂಚಾರವನ್ನು ಜ. 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ರೈಲು ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸಗಡ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ಮಾರ್ಗಗಳಲ್ಲಿ ತೆರಳಲಿದೆ. ರಾಜ್ಯದಲ್ಲಿ ರಾಯಚೂರು, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.