ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ 2011ರ ಜನಗಣತಿ ಆಧಾರದ ಮೇರೆಗೆ 82 ವಾರ್ಡ್‌ಗಳಿಗೂ ಮೀಸಲು ನಿಗದಿಪಡಿಸಿ ಕರಡನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಈವರೆಗೂ 68 ವಾರ್ಡ್‌ಗಳಿದ್ದವು. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಈ ಸಂಖ್ಯೆ 82ಕ್ಕೇರಿದೆ. ಬಹುತೇಕ ಕಡೆಗಳಲ್ಲಿ ಹಳೇ ವಾರ್ಡ್ ಗಳ ಸಂಖ್ಯೆ ಹಾಗೂ ಭೌಗೋಳಿಕ ವ್ಯಾಪ್ತಿಯನ್ನು ಬದಲಿಸಲಾಗಿದೆ. ಕೆಲವು ಬಡಾವಣೆಗಳನ್ನು ಹೊಸದಾಗಿ ಸೇರಿಸಲಾಗಿದೆ, ಮತ್ತೇ ಕೆಲವು ಕಡೆಗಳಲ್ಲಿ ಬಡಾವಣೆಗಳನ್ನು ಕೈ ಬಿಟ್ಟು ಹೊಸ ವಾರ್ಡ್ ಗಳಿಗೆ ಸೇರಿಸಲಾಗಿದೆ.
ಕರಡು ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಕಾರಣ ಸಹಿತ, ಸೂಕ್ತ ದಾಖಲೆಗಳೊಂದಿಗೆ ಲಿಖಿತವಾಗಿ ಧಾರವಾಡ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ಹಾಲಿ ಸದಸ್ಯರಿಗೆ ನಿರಾಸೆ:
ಬಹುತೇಕ ವಾರ್ಡ್‌ಗಳ ಮೀಸಲು ಬದಲಾಗಿರುವುದರಿಂದ ಹಾಲಿ ಸದಸ್ಯರು ಅದೇ ವಾರ್ಡ್‌ನಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದು, ತೀವ್ರ ನಿರಾಸೆಗೊಳಗಾಗಿದ್ದಾರೆ.ಮೇಯರ್ ಸುಧೀರ್ ಸರಾಫ್ ಅವರು ಪ್ರತಿನಿಧಿಸುತ್ತಿದ್ದ ವಾರ್ಡ್ ಸಾಮಾನ್ಯ ಕ್ಷೇತ್ರವಾಗಿತ್ತು. ಇದೀಗ ಸಾಮಾನ್ಯ ಮಹಿಳಾ ಮೀಸಲು ನಿಗದಿಯಾಗಿದೆ.
ಉಪಮೇಯರ್ ಮೇನಕಾ ಹುರಳಿ ಪ್ರತಿನಿಧಿಸುತ್ತಿರುವ 32 ನೇ ವಾರ್ಡ್ ಇದೀಗ 50ನೇ ವಾರ್ಡ್ ಆಗಿ ಬದಲಾಗಿದೆ. ಜೊತೆಗೆ ಒಬಿಸಿ ಮಹಿಳೆ ಬದಲಿಗೆ ಎಸ್‌ಸಿ ಮಹಿಳಾ ಮೀಸಲು ಕ್ಷೇತ್ರವಾಗಿದೆ. ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ ಅವರು ಪ್ರತಿನಿಧಿಸುತ್ತಿರುವ 59ನೇ ವಾರ್ಡ್ ಇದೀಗ 75ನೇ ವಾರ್ಡ್ ಆಗಿ ಬದಲಾಗಿದೆ. ಜೊತೆಗೆ ಎಸ್‌ಸಿ ಮೀಸಲು ಬದಲಾಗಿ ಸಾಮಾನ್ಯ ಮಹಿಳಾ ಕ್ಷೇತ್ರವಾಗಿ ಬದಲಾಗಿದೆ.
ವಾರ್ಡ್‌ವಾರು ಮೀಸಲು:
ವಾರ್ಡ್ 1–ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 2–ಸಾಮಾನ್ಯ, ವಾರ್ಡ್ 3–ಸಾಮಾನ್ಯ, ವಾರ್ಡ್ 4–ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ್ 5–ಸಾಮಾನ್ಯ, ವಾರ್ಡ್ 6– ಹಿಂದುಳಿದ ವರ್ಗ(ಎ), ವಾರ್ಡ್ 7–ಹಿಂದುಳಿದ ವರ್ಗ(ಬಿ), ವಾರ್ಡ್ 8– ಸಾಮಾನ್ಯ ಮಹಿಳೆ, ವಾರ್ಡ್ 9–ಸಾಮಾನ್ಯ, ವಾರ್ಡ್ 10– ಹಿಂದುಳಿದ ವರ್ಗ(ಎ) ಮಹಿಳೆ.
ವಾರ್ಡ್ 11– ವರ್ಗ(ಬಿ) ಮಹಿಳೆ, ವಾರ್ಡ್ 12–ಸಾಮಾನ್ಯ, ವಾರ್ಡ್ 13– ಹಿಂದುಳಿದ ವರ್ಗ(ಎ), ವಾರ್ಡ್ 14– ಸಾಮಾನ್ಯ ಮಹಿಳೆ, ವಾರ್ಡ್ 15– ಹಿಂದುಳಿದ ವರ್ಗ(ಬಿ), ವಾರ್ಡ್ 16– ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 17–ಸಾಮಾನ್ಯ, ವಾರ್ಡ್ 18– ಸಾಮಾನ್ಯ, ವಾರ್ಡ್ 19– ಹಿಂದುಳಿದ ವರ್ಗ(ಎ), ವಾರ್ಡ್ 20–ಸಾಮಾನ್ಯ ಮಹಿಳೆ.
ವಾರ್ಡ್ 21–ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 22–ಹಿಂದುಳಿದ ವರ್ಗ(ಬಿ), ವಾರ್ಡ್ 23–ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 24– ಪರಿಶಿಷ್ಟ ಜಾತಿ, ವಾರ್ಡ್ 25–ಪರಿಶಿಷ್ಟ ಪಂಗಡ, ವಾರ್ಡ್ 26–ಸಾಮಾನ್ಯ, ವಾರ್ಡ್ 27–ಸಾಮಾನ್ಯ, ವಾರ್ಡ್ 28–ಹಿಂದುಳಿದ ವರ್ಗ(ಎ), ವಾರ್ಡ್ 29–ಸಾಮಾನ್ಯ ಮಹಿಳೆ, ವಾರ್ಡ್ 30–ಹಿಂದುಳಿದ ವರ್ಗ(ಎ) ಮಹಿಳೆ.
ವಾರ್ಡ್ 31–ಸಾಮಾನ್ಯ, ವಾರ್ಡ್ 32–ಸಾಮಾನ್ಯ, ವಾರ್ಡ್ 33–ಹಿಂದುಳಿದ ವರ್ಗ(ಎ), ವಾರ್ಡ್ 34–ಸಾಮಾನ್ಯ ಮಹಿಳೆ, ವಾರ್ಡ್ 35–ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 36– ಸಾಮಾನ್ಯ, ವಾರ್ಡ್ 37–ಸಾಮಾನ್ಯ, ವಾರ್ಡ್ 38–ಹಿಂದುಳಿದ ವರ್ಗ(ಎ), ವಾರ್ಡ್ 39–ಸಾಮಾನ್ಯ ಮಹಿಳೆ, ವಾರ್ಡ್ 40–ಸಾಮಾನ್ಯ.
ವಾರ್ಡ್ 41–ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 42–ಸಾಮಾನ್ಯ, ವಾರ್ಡ್ 43–ಹಿಂದುಳಿದ ವರ್ಗ(ಎ), ವಾರ್ಡ್ 44–ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 45–ಸಾಮಾನ್ಯ ಮಹಿಳೆ, ವಾರ್ಡ್ 46–ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 47–ಸಾಮಾನ್ಯ, ವಾರ್ಡ್ 48– ಸಾಮಾನ್ಯ, ವಾರ್ಡ್ 49–ಹಿಂದುಳಿದ ವರ್ಗ(ಎ), ವಾರ್ಡ್ 50–ಪರಿಶಿಷ್ಟ ಪಂಗಡ ಮಹಿಳೆ.
ವಾರ್ಡ್ 51– ಸಾಮಾನ್ಯ ಮಹಿಳೆ, ವಾರ್ಡ್ 52–ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 53–ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 54–ಸಾಮಾನ್ಯ, ವಾರ್ಡ್ 55– ಸಾಮಾನ್ಯ, ವಾರ್ಡ್ 56– ಹಿಂದುಳಿದ ವರ್ಗ(ಎ), ವಾರ್ಡ್ 57–ಸಾಮಾನ್ಯ ಮಹಿಳೆ, ವಾರ್ಡ್ 58–ಪರಿಶಿಷ್ಟ ಜಾತಿ, ವಾರ್ಡ್ 59–ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 60–ಸಾಮಾನ್ಯ.
ವಾರ್ಡ್ 61–ಸಾಮಾನ್ಯ, ವಾರ್ಡ್ 62–ಸಾಮಾನ್ಯ ಮಹಿಳೆ, ವಾರ್ಡ್ 63– ಸಾಮಾನ್ಯ, ವಾರ್ಡ್ 64–ಸಾಮಾನ್ಯ, ವಾರ್ಡ್ 65– ಹಿಂದುಳಿದ ವರ್ಗ(ಎ), ವಾರ್ಡ್ 66–ಹಿಂದುಳಿದ ವರ್ಗ(ಎ)ಮಹಿಳೆ, ವಾರ್ಡ್ 67–ಹಿಂದುಳಿದ ವರ್ಗ(ಎ), ವಾರ್ಡ್ 68–ಸಾಮಾನ್ಯ ಮಹಿಳೆ, ವಾರ್ಡ್ 69–ಸಾಮಾನ್ಯ ಮಹಿಳೆ, ವಾರ್ಡ್ 70–ಸಾಮಾನ್ಯ ಮಹಿಳೆ.
ವಾರ್ಡ್ 71–ಸಾಮಾನ್ಯ ಮಹಿಳೆ, ವಾರ್ಡ್ 72–ಸಾಮಾನ್ಯ ಮಹಿಳೆ, ವಾರ್ಡ್ 73–ಸಾಮಾನ್ಯ ಮಹಿಳೆ, ವಾರ್ಡ್ 74–ಸಾಮಾನ್ಯ ಮಹಿಳೆ, ವಾರ್ಡ್ 75–ಸಾಮಾನ್ಯ ಮಹಿಳೆ, ವಾರ್ಡ್ 76–ಸಾಮಾನ್ಯ ಮಹಿಳೆ, ವಾರ್ಡ್ 77–ಸಾಮಾನ್ಯ ಮಹಿಳೆ, ವಾರ್ಡ್ 78–ಸಾಮಾನ್ಯ ಮಹಿಳೆ, ವಾರ್ಡ್ 79–ಪರಿಶಿಷ್ಟ ಜಾತಿ, ವಾರ್ಡ್ 80– ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 81–ಸಾಮಾನ್ಯ ಮಹಿಳೆ, ವಾರ್ಡ್ 82–ಪರಿಶಿಷ್ಟ ಜಾತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.