ADVERTISEMENT

ಹುಬ್ಬಳ್ಳಿ |ವಾಣಿಜ್ಯ ಸಂಸ್ಥೆಗಳು- ನಿಯಮ ಗಾಳಿಗೆ; ಆಗದ ನೋಂದಣಿ

ಪರವಾನಗಿ ಪತ್ರ ಪಡೆಯದೇ ದೂರವುಳಿದ ವಾಣಿಜ್ಯ ಸಂಸ್ಥೆಗಳು

ಎಲ್‌.ಮಂಜುನಾಥ
Published 23 ಸೆಪ್ಟೆಂಬರ್ 2023, 6:42 IST
Last Updated 23 ಸೆಪ್ಟೆಂಬರ್ 2023, 6:42 IST
<div class="paragraphs"><p>ವಿನಯ ಜೆ.ಜವಳಿ</p></div>

ವಿನಯ ಜೆ.ಜವಳಿ

   

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಇಂದಿಗೂ ಕೆಲ ವಾಣಿಜ್ಯ ಮಳಿಗೆ, ಸಂಸ್ಥೆ ಮತ್ತು ಅಂಗಡಿಯವರು ‘ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ–1961 ಅನ್ವಯ ನೋಂದಣಿ ಮಾಡಿಸಿ, ಪರವಾನಗಿ ಪತ್ರ ಪಡೆದಿಲ್ಲ. 

ಜಿಲ್ಲೆಯಲ್ಲಿ ಪ್ರಸ್ತುತ ಅಧಿಕೃತವಾಗಿ 67,777 ವಾಣಿಜ್ಯ ವಹಿವಾಟುಗಳಿದ್ದು, ಸುಮಾರು 20 ಸಾವಿರ ಮಾತ್ರ ನೋಂದಣಿಯಾಗಿವೆ. ಇನ್ನೂ 47 ಸಾವಿರ ನೋಂದಣಿ ಆಗಬೇಕಿದೆ.

ADVERTISEMENT

‘ನೋಂದಣಿ ಮಾಡಿ ಕೊಳ್ಳದ ಕೆಲ ಉದ್ಯಮಿ ಗಳು, ವ್ಯಾಪಾರಿಗಳಿಂದ ಬೇರೆ ಬೇರೆ ಸಮಸ್ಯೆಗಳಿಗೆ ತಲೆದೋರುತ್ತದೆ. ಅವರು ಹಲವು ಸಂಗತಿಗಳನ್ನು ಮುಚ್ಚಿಡುತ್ತಾರೆ. ಕಾರ್ಮಿಕರು ಶೋಷಣೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಕ್ಕುಗಳಿಂದ ಕಾರ್ಮಿಕರು ವಂಚಿತರಾಗುತ್ತಾರೆ. ಸರ್ಕಾರದ ನಿಯಮಗಳು ಪಾಲನೆಯಾ ಗುವುದಿಲ್ಲ. ಕಾರ್ಮಿಕ ಇಲಾಖೆಯ ಗಮನಕ್ಕೆ ತರುವುದಿಲ್ಲ’ ಎಂದು ಕಾರ್ಮಿಕ ಸಂಘಟನೆ ನಾಯಕ ರೊಬ್ಬರು ತಿಳಿಸಿದರು.

‘ಆಯಾ ವ್ಯಾಪಾರ ಸ್ಥರು ಅಥವಾ ಉದ್ಯಮಿಗಳು ನೋಂದಣಿ ಮಾಡಿಕೊಂಡಲ್ಲಿ, ಅವರ ಕುರಿತು ನಿಖರ ಮಾಹಿತಿ ಸಿಗುತ್ತದೆ. ನಿಯಮಾವಳಿ ಪ್ರಕಾರ, ಪ್ರತಿಯೊಂದು ವಿಷಯ ದಾಖಲಿಸಬೇ ಕಾಗುತ್ತದೆ. ಸರ್ಕಾರಿ ಕಾಯ್ದೆ ಪಾಲಿಸಬೇಕು. ಆದರೆ, ಕೆಲವರು ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ವ್ಯಾಪಾರಸ್ಥರು ಅಲ್ಲದೇ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ  ಮಾಡಿಕೊಳ್ಳು ವುದು ಅಗತ್ಯ’ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ ಎಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋಂದಣಿ ಮಾಡಿಕೊಳ್ಳದ ವಾಣಿಜ್ಯ ಸಂಸ್ಥೆ, ಉದ್ಯಮದಲ್ಲಿ ವಹಿ ವಾಟು ವೇಳೆ ತೊಂದರೆಯಾದರೆ, ಕಾನೂನು ಅನ್ವಯ ಸೌಲಭ್ಯ ಸಿಗುವುದಿಲ್ಲ. 1961ರ ಅಂಗಡಿ ಕಾಯ್ದೆ ಅಡಿ ಯಲ್ಲಿ ಸಂಸ್ಥೆ, ಅಂಗಡಿ ನಡೆಸುತ್ತಿದ್ದರೆ, ಸಂಸ್ಥೆ ಆರಂಭವಾಗಿ 30 ದಿನದೊಳಗೆ ಕಾರ್ಮಿಕ ಪರವಾನಗಿ ಪಡೆಯಬೇಕು.  ಕಾರ್ಮಿಕರು ಇರಲಿ, ಇಲ್ಲದೇ ಇದ್ದರೂ ಪರವಾನಗಿ ಕಡ್ಡಾಯ’ ಎಂದರು.

ಅಭಿಯಾನ ಇಂದು

ಜಿಲ್ಲೆಯ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಕೆಸಿಸಿಐ) ಸಂಸ್ಥೆ ಸಹಯೋಗದಲ್ಲಿ ಶನಿವಾರ (ಸೆಪ್ಟೆಂಬರ್ 23) ಬೆಳಿಗ್ಗೆ 11 ರಿಂದ ಸಂಜೆ 5ರವರೆಗೆ ವಾಣಿಜ್ಯ ಸಂಸ್ಥೆಯಲ್ಲಿಯೇ ‘ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ ನೊಂದಣಿ ಅಭಿಯಾನ’ ಹಮ್ಮಿಕೊಂಡಿದೆ. ನೋಂದಣಿಗೆ ಮಾಲೀಕರು ಗುರುತಿನ ಪುರಾವೆ–ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್‌, ಜಿಎಸ್‌ಟಿ ಅಥವಾ ಬಾಡಿಗೆ ಕರಾರು ಪತ್ರ ಮತ್ತು ವಿದ್ಯುತ್ ಬಿಲ್‌ನ ಪ್ರತಿ ತರಬೇಕು.

ಕಾಯ್ದೆ ಅನ್ವಯ ವಾಣಿಜ್ಯ ಮಳಿಗೆ, ಸಂಸ್ಥೆ, ಅಂಗಡಿಯವರು ಕಾರ್ಮಿಕರು ಇರಲಿ, ಇಲ್ಲದಿರಲಿ ವ್ಯಾಪಾರ ವಹಿವಾಟಿಗೆ ಸಂಬಂಧಿಸಿ ಪರವಾನಗಿ ಪತ್ರ ಹೊಂದುವುದು ಕಡ್ಡಾಯವಿನಯ
ಜೆ.ಜವಳಿ, ಅಧ್ಯಕ್ಷ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.