ADVERTISEMENT

ಹುಬ್ಬಳ್ಳಿ | ಸಂಭ್ರಮದ ಈದ್ ಉಲ್ ಫಿತ್ರ್‌; ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 6:43 IST
Last Updated 11 ಏಪ್ರಿಲ್ 2024, 6:43 IST
   

ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಈದ್-ಉಲ್-ಫಿತ್ರ್ ಅಂಗವಾಗಿ ಮುಸ್ಲಿಮರು ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಕ್ಕಳು, ವೃದ್ಧರು, ಯುವಕರು ಹೊಸ ಬಟ್ಟೆ ಧರಿಸಿ, ಉರಿ ಬಿಸಿಲಿನಲ್ಲೂ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸಮುದಾಯದವರು ಪರಸ್ಪರ ಅಪ್ಪಿಕೊಂಡು, ಹಬ್ಬದ ಶುಭಾಶಯ ವಿನಿಮಯಮಾಡಿಕೊಂಡರು.

ಪ್ರಾರ್ಥನೆ ನಂತರ ಬಡವರಿಗೆ ದಾನ ನೀಡಿದರು. ಲೋಕ ಕಲ್ಯಾಣಕ್ಕೆ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಧರ್ಮಗುರುಗಳು, ಹಬ್ಬದ ಸಂದೇಶ ತಿಳಿಸಿದರು.

ADVERTISEMENT

ನಂತರ ‌ಮೂರು ಸಾವಿರ ಮಠಕ್ಕೆ ತೆರಳಿದ ಮುಸ್ಲಿಂ ಮುಖಂಡರು, ಹಬ್ಬದ ಶುಭಾಶಯ ತಿಳಿಸಿದರು.

ಸಚಿವ ಸಂತೊಷ್‌ ಲಾಡ್‌, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ, ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಇದ್ದರು.

ಮುಂಜಾಗ್ರತಾ ಕ್ರಮವಾಗಿ ಈದ್ಗಾ ಮೈದಾನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ, ದಟ್ಟಣೆ ಆಗದಂತೆ ಕ್ರಮ ವಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.