ಹುಬ್ಬಳ್ಳಿ: ಬೆಂಗಳೂರಿನ ದೇವನಹಳ್ಳಿ ಪಾಸಿಂಗ್ ನಂಬರ್ ಇರುವ ಕಂಟೇನರ್ ಲಾರಿಯಲ್ಲಿ ಉಸಿರಾಡಲು ಸಾಧ್ಯವಾಗದಂತೆ ಎಮ್ಮಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕ, ಕ್ಲೀನರ್ ಮತ್ತು ಲಾರಿ ಮಾಲೀಕರ ವಿರುದ್ಧ ಗೋಕುಲ ರಸ್ತೆಯ ಆಶೀರ್ವಾದ ಹಂಜಗಿ ದೂರು ನೀಡಿದ್ದಾರೆ. ಗದಗ ಬೈಪಾಸ್ ರಸ್ತೆಯಲ್ಲಿ ಭಾನುವಾರ ಸಂಜೆ ಲಾರಿಯಲ್ಲಿ 35 ಎಮ್ಮೆಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದರು. ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಎಮ್ಮೆಗಳನ್ನು ಪರಸಾಪುರದ ಪಾಂಜಾರಪೋಳಕ್ಕೆ ಸಾಗಿಸಲಾಗಿದೆ.
₹3.40 ಲಕ್ಷ ವಂಚನೆ: ಮಲೇಷಿಯಾ ದೇಶಕ್ಕೆ ಕಳುಹಿಸಿದ ಪಾರ್ಸೆಲ್‌ನಲ್ಲಿ ಕಾನೂನು ಬಾಹಿರ ವಸ್ತುಗಳಿವೆ ಎಂದು ಧಾರವಾಡದ ವೈದ್ಯ ರಾಮಚಂದ್ರ ಅವರಿಗೆ ದೆಹಲಿ ಕಸ್ಟಮ್ ಕಚೇರಿ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ಅವರಿಂದ ₹3.40 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಪಾರ್ಸೆಲ್ ತಡೆಹಿಡಿದ್ದು, ಸಂಬಂಧಪಟ್ಟ ಅಧಿಕಾರಿ ಜೊತೆ ಮಾತನಾಡುವಂತೆ ಹೇಳಿ ಕರೆ ವರ್ಗಾಯಿಸಿ ₹3.40 ಲಕ್ಷ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.