ADVERTISEMENT

ಹುಬ್ಬಳ್ಳಿ: ರಸ್ತೆ ಬದಿ ಸಸಿ ನೆಟ್ಟ 'ವೃಕ್ಷಮಾತೆ' ತಿಮ್ಮಕ್ಕ

ಪರಿಸರ ರಾಯಭಾರಿಯ ಕಾಲಿಗೆರಗಿ ಆಶೀರ್ವಾದ ಪಡೆದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 6:16 IST
Last Updated 29 ಆಗಸ್ಟ್ 2022, 6:16 IST
   

ಹುಬ್ಬಳ್ಳಿ: ನಗರದ ಶಕ್ತಿ ಕಾಲೊನಿಯ ಜೆ.ಕೆ.‌ ಇಂಗ್ಲಿಷ್ ಶಾಲೆ ಬಳಿ ವಸುಂಧರಾ ಫೌಂಡೇಷನ್ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಪರಿಸರ ರಾಯಭಾರಿ "ವೃಕ್ಷಮಾತೆ" ಸಾಲುಮರದ ತಿಮ್ಮಕ್ಕ ಅವರು ಸೋಮವಾರ ವಿದ್ಯಾರ್ಥಿಗಳೊಂದಿಗೆ ರಸ್ತೆ ಬದಿ ಸಸಿ ನೆಟ್ಟರು.

ಬಳಿಕ‌ ಮಾತನಾಡಿದ ಅವರು, 'ಎಲ್ಲರೂ ಸಸಿ ನೆಟ್ಟು ಚನ್ನಾಗಿ ಬೆಳೆಸಿ' ಎಂದು ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಗೆ ಸಲಹೆ ನೀಡಿದರು.

ಮೈಸೂರು ಪೇಟ ತೊಡಿಸಿ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ತಿಮ್ಮಕ್ಕ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.

ADVERTISEMENT

ತಿಮ್ಮಕ್ಕ ಅವರ ಪುತ್ರ ಬಳ್ಳೂರು ಉಮೇಶ, ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ, ಧರ್ಮರಾಜ ಅಬ್ಬಯ್ಯ, ಪವನ ಮಿಸ್ಕಿನ್, ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು‌ ಇದ್ದರು.

ಎಪಿಎಂಸಿ ಆವರಣದಲ್ಲಿಸಸಿ ನೆಡುವ ಕಾರ್ಯಕ್ರಮ
ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿರುವ ಶ್ರೀಮತಿ ಶಿವಲಿಂಗಮ್ಮ ಶಂಕರಗೌಡ ಬಾಳನಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ , ರಾಜ್ಯ ಸರ್ಕಾರದ ಪರಿಸರ ರಾಯಭಾರಿ "ವೃಕ್ಷಮಾತೆ" ಸಾಲುಮರದ ತಿಮ್ಮಕ್ಕ ಸೋಮವಾರ ಸಸಿ ನೆಟ್ಟು ನೀರೆರೆದರು. ಆರ್‌ಎಫ್‌ಒ ಅರವಿಂದ ಕಣವಿ, ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ, ಎಪಿಎಂಸಿ ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಯಕಲಾಸಪುರ, ಕಡೂರಿನ ಭದ್ರ ಸ್ವಾಮೀಜಿ, ಚನ್ನು ಹೊಸಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.