ಹುಬ್ಬಳ್ಳಿ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಡಿ. 27 ಮತ್ತು 28ರಂದು ನಡೆದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) 2021–22ನೇ ಸಾಲಿನಎರಡು ದಿನಗಳ 97ನೇರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ (ಎನ್‌ಎಟಿಸಿಒಎನ್) ಐಎಂಎ ಹುಬ್ಬಳ್ಳಿ ಶಾಖೆಯು ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.
ಅತ್ಯುತ್ತಮ ಶಾಖೆ, ಸ್ಥಳೀಯ ಶಾಖೆಗೆ ಆಯ್ಕೆಯಾದ ಅತ್ಯುತ್ತಮ ಅಧ್ಯಕ್ಷ ವಿಭಾಗದಲ್ಲಿ ಡಾ. ಎಸ್.ವೈ. ಮುಲ್ಕಿ ಪಾಟೀಲ ಹಾಗೂ ಅತ್ಯುತ್ತಮ ಗೌರವ ಕಾರ್ಯದರ್ಶಿ ವಿಭಾಗದಲ್ಲಿ ಡಾ. ಮಂಜುನಾಥ ನೇಕಾರ ಅವರು ಪ್ರಶಸ್ತಿಗೆ ಭಾಜನರಾದರು. ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ. ಸಹಜಾನಂದ್ ಸಿಂಗ್, ಗೌರವ ಕಾರ್ಯದರ್ಶಿ ಡಾ. ಜಾವೇಶ್ ಲೆಲೆ ಹಾಗೂ ಮಾಜಿ ಅಧ್ಯಕ್ಷ ಡಾ. ಜಯಲಾಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಇದಕ್ಕೂ ಮುಂಚೆ ಶಾಖೆಗೆ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಎರಡು ಪ್ರಶಸ್ತಿಗಳು ಸಿಕ್ಕಿದ್ದವು. ಡಾ. ಮಂಜುನಾಥ ನೇಕಾರ್ ಅವರು ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯದರ್ಶಿ ಹಾಗೂ ರಾಜ್ಯಮಟ್ಟದ ಮಹಿಳಾ ವೈದ್ಯರ ವಿಭಾಗದಲ್ಲಿ ಡಾ. ಸಂಗೀತಾ ಅಂಟರತಾನಿ ಅವರು ಅತ್ಯುತ್ತಮ ಸ್ಥಳೀಯ ಶಾಖೆಯ ಅಧ್ಯಕ್ಷೆ ಮತ್ತು ಡಾ. ಭಾರತಿ ಭಾವಿಕಟ್ಟಿ ಅವರುಅತ್ಯುತ್ತಮ ಕಾರ್ಯದರ್ಶಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರು.
ಸಾರ್ವಜನಿಕ ಆರೋಗ್ಯ ಜಾಗೃತಿ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಉಚಿತವಾಗಿ ಔಷಧ ವಿತರಣೆ ಸೇರಿದಂತೆ ಶಾಖೆಯಿಂದ ಕೈಗೊಂಡಿದ್ದ ವಿವಿಧ ಕಾರ್ಯಕ್ರಮಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಡಾ. ಎಸ್.ವೈ. ಮುಲ್ಕಿ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.