ADVERTISEMENT

ಧಾರವಾಡ | ಅಕ್ರಮ ಸಾಗಣೆ: 2.5 ಕೆ.ಜಿ ಆಭರಣ ವಶ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:05 IST
Last Updated 18 ಅಕ್ಟೋಬರ್ 2024, 0:05 IST
ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನ ಹಾಗೂ ಬೆಳ್ಳಿಯ ಆಭರಣ
ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನ ಹಾಗೂ ಬೆಳ್ಳಿಯ ಆಭರಣ   

ಧಾರವಾಡ: ದಾಖಲೆ ಇಲ್ಲದೆ ಬಸ್‌ನಲ್ಲಿ ಸಾಗಿಸುತ್ತಿದ್ದ ಸುಮಾರು 2.5 ಕೆ.ಜಿ ಚಿನ್ನ, ಬೆಳ್ಳಿಯ ಆಭರಣಗಳನ್ನು (ಅಂದಾಜು ಮೌಲ್ಯ ₹73.35 ಲಕ್ಷ) ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿ ಅಭಿಷೇಕ್‌ ಜೀತುಸಿಂಗ್‌ ದೇವಲ್‌ನನ್ನು ಬಂಧಿಸಿದ್ದಾರೆ.

ಆರೋಪಿ ಖಾಸಗಿ ಬಸ್‌ನಲ್ಲಿ ಮುಂಬೈನಿಂದ ಹುಬ್ಬಳ್ಳಿಗೆ ಆಭರಣಗಳನ್ನು ಸಾಗಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಮತ್ತು ವಿದ್ಯಾಗಿರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆತನನ್ನು ಎಸ್‌ಡಿಎಂ ಕಾಲೇಜು ಸಮೀಪ ಆಭರಣ ಸಮೇತ ವಶಕ್ಕೆ ಪಡೆದಿದ್ದಾರೆ.

ಕೊರಿಯರ್‌ ಉದ್ಯೋಗಿಯಾಗಿರುವ ಅಭಿಷೇಕ್‌, ಹುಬ್ಬಳ್ಳಿಯ ಚಾವಲ್‌ ಜೋಳದ ಓಣಿಯ ನಿವಾಸಿ. ಆತನಿಂದ 1.1 ಕೆ.ಜಿ ಚಿನ್ನದ ಆಭರಣ ಹಾಗೂ 1 ಕೆ.ಜಿ 463 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ADVERTISEMENT

ಆರೋಪಿ ಅಭಿಷೇಕ್‌ ಆಭರಣಗಳನ್ನು ಮುಂಬೈನಿಂದ ಹುಬ್ಬಳ್ಳಿಗೆ ಅಕ್ರಮವಾಗಿ ತಂದು ಜಿಎಸ್‌ಟಿ ಮತ್ತು ಬಿಲ್‌ ಇಲ್ಲದೆ ಅಭರಣ ಅಂಗಡಿಯವರಿಗೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಎಸ್.ಟಿ.ಒಡೆಯರ, ಸಿಸಿಬಿ ಇನ್‌ಸ್ಪೆಕ್ಟರ್‌ ಪ್ರಭು ಗಂಗೇನಹಳ್ಳಿ, ವಿದ್ಯಾಗಿರಿ ಠಾಣೆ ಇನ್‌ಸ್ಪೆಕ್ಟರ್‌ ಸಂಗಮೇಶ ದಿಡಿಗನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.