ADVERTISEMENT

ಮೂವರಿಗೆ ಇನ್ಫೊಸಿಸ್ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:52 IST
Last Updated 4 ಜೂನ್ 2022, 19:52 IST
ಪಿ. ಚಂದ್ರಿಕಾ
ಪಿ. ಚಂದ್ರಿಕಾ   

ಧಾರವಾಡ: ಇನ್ಫೊಸಿಸ್ ಪ್ರತಿ ಷ್ಠಾನದ ಸಾಹಿತ್ಯ ಪ್ರಶಸ್ತಿ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖ ಕಿಯರ ಸಂಘದ ಸಂಯುಕ್ತ ಆಶ್ರಯ ದಲ್ಲಿ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಮೂವರು ಲೇಖ ಕಿಯರ ಕೃತಿಗಳು
ಆಯ್ಕೆಯಾಗಿವೆ.

2019ರ ಪ್ರಶಸ್ತಿಯು ಬೆಂಗಳೂರಿನ ಪಿ. ಚಂದ್ರಿಕಾ ಅವರ ನಾಟಕ ‘ಮೋದಾಳಿ’, 2020ರ ಪ್ರಶಸ್ತಿಯು ಮೈಸೂರಿನ ಜಯಶ್ರೀ ಹೆಗಡೆ ಅವರ ಪ್ರಬಂಧ ಸಂಕಲನ
‘ಇಣುಕಿದಲ್ಲಿ ಛಂದ’ ಕೃತಿಗೆ ಹಾಗೂ 2021ರ ಪ್ರಶಸ್ತಿಯು ಮಂಗಳೂರಿನ ಬಿ.ಎಂ.ರೋಹಿಣಿ ಅವರ ಆತ್ಮಕತೆ ‘ನಾಗಂದಿಗೆಯೊಳಗಿಂದ’ ಕೃತಿಗೆ ದೊರೆತಿದೆ. ಪ್ರಶಸ್ತಿಯು ತಲಾ ₹10 ಸಾವಿರ, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಧಾರವಾಡದಲ್ಲಿ ಜೂನ್ 18ರ ಸಂಜೆ ನಡೆಯುವ ಸಮಾರಂಭದಲ್ಲಿ ಪ್ರತಿಷ್ಠಾನದ ಡಾ.ಸುಧಾಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಪ್ರಕಟಣೆ ತಿಳಿಸಿದೆ.

ಡಾ. ಎಲ್.ಸಿ.ಸುಮಿತ್ರಾ,
ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ಶಾಲಿನಿ ರಘುನಾಥ ಮತ್ತು ಸುನಂದಾ ಕಡಮೆ, ಡಾ. ವಿ.ಟಿ.ನಾಯಕ ಹಾಗೂ ಡಾ. ಬಸೂ ಬೇವಿನಗಿಡದ ಅವರುನಿರ್ಣಾಯಕರಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.