ಹುಬ್ಬಳ್ಳಿ: ‘2019–2020ರ ಬಜೆಟ್‌ನಲ್ಲಿ ಖರ್ಚಾಗದ ₹29,826.44 ಕೋಟಿ ಅನುದಾನ ಮರು ಹೊಂದಾಣಿಕೆ ವಿವರವನ್ನು ಸಿಎಜಿಗೆ (ಮಹಾಲೇಖಪಾಲ) ನೀಡಲು ಹಣಕಾಸು ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಎಜಿ ವರದಿಯಲ್ಲಿನ ಆಕ್ಷೇಪ ಕುರಿತು ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೆಯೂ ಸಿಎಜಿಯಿಂದ ಇಂತಹ ವರದಿ ಬಂದಿತ್ತು. ಹಣಕಾಸು ಇಲಾಖೆ ಎಲ್ಲಾ ವಿವರಗಳನ್ನು ಕೊಟ್ಟಿದೆ. ವರದಿ ಕುರಿತು ಮತ್ತೊಮ್ಮೆ ಪರಿಶೀಲಿಸಿ ವಿವರ ನೀಡಲಾಗುವುದು’ ಎಂದರು.
‘ಕಲಬುರ್ಗಿ ಮಹಾನಗರ ಪಾಲಿಕೆಯ ಮೇಯರ್–ಉಪ ಮೇಯರ್ ಚುನಾವಣೆಗೆ ಮೊದಲು ಅಧಿಸೂಚನೆಯಾಗಲಿ. ಆ ಕುರಿತು ಈಗಲೇ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಸದನದಲ್ಲಿ ಉತ್ತರ ನೀಡುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.