ಕುಂದಗೋಳ: 2023-24 ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳಿಗೆ ಮಧ್ಯಂತರ ಪರಿಹಾರ ಮಂಜೂರಾಗಿದೆ.
ಕುಂದಗೋಳ ತಾಲ್ಲೂಕಿನಲ್ಲಿ ವಿಮೆಗೆ ಒಳಪಟ್ಟ 4256.14 ಹೇಕ್ಟರ್ ಮೆಣಸಿನಕಾಯಿ ಬೆಳೆಗೆ ಒಟ್ಟು ₹4 ಕೋಟಿ ₹35 ಲಕ್ಷ ಗಳ ಬೆಳೆ ವಿಮೆ ಮಧ್ಯಂತರ ಪರಿಹಾರ ಮಂಜೂರಾಗಿದ್ದು ಒಟ್ಟು 5065 ರೈತರಿಗೆ ಪ್ರತಿ ಹೇಕ್ಟರ್‌ಗೆ ₹10,237.00 ಗಳಂತೆ ಈ ಹಣ ದೊರಯಲಿದೆ.
ಈರುಳ್ಳಿ ಬೆಳೆಯ ಬೆಳೆವಿಮೆ ತುಂಬಿದ 115 ರೈತರಿಗೆ 73 ಹೇಕ್ಟರ್ ಭೂಪ್ರದೇಶಕ್ಕಾಗಿ ₹11 ಲಕ್ಷ 77 ಸಾವಿರ ಗಳಷ್ಟು ಮಧ್ಯಂತರ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗುವುದು ಎಂದು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮಂಜುನಾಥ ಕರೋಶಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.