ADVERTISEMENT

ದುರ್ಬಲ ವರ್ಗದ ಧ್ವನಿಯಾಗಿದ್ದ ಜಗಜೀವನ್‌ ರಾಂ: ಸಿ.ಎಂ ನಿಂಬಣ್ಣವರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:39 IST
Last Updated 5 ಏಪ್ರಿಲ್ 2022, 15:39 IST
ಕಲಘಟಗಿಯಲ್ಲಿ ನಡೆದ ಬಾಬು ಜಗಜೀವನ್ ರಾಂ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು
ಕಲಘಟಗಿಯಲ್ಲಿ ನಡೆದ ಬಾಬು ಜಗಜೀವನ್ ರಾಂ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು   

ಕಲಘಟಗಿ: ಸಮಾಜದಿಂದ ಅಲಕ್ಷಿಸಲ್ಪಟ್ಟ ಹಾಗೂ ದೇಶದ ದುರ್ಬಲ ವರ್ಗದವರ ಧ್ವನಿಯಾಗಿ ಬದುಕಿದ ನಾಯಕ ಬಾಬು ಜಗಜೀವನ್ ರಾಂ ಎಂದು ಶಾಸಕ ಸಿ.ಎಂ ನಿಂಬಣ್ಣವರ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ತಾಲ್ಲೂಕ ಆಡಳಿತ ಆಯೋಜಿಸಿದ್ದ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯವಾಗಿ ಅಪಾರ ಶಕ್ತಿ ಬೆಳೆಸಿಕೊಂಡಿದ್ದ ಅವರು, ಹಸಿರು ಕ್ರಾಂತಿಯ ಹರಿಕಾರ ಎಂದು ಬಿರುದು ಪಡೆದರು ಎಂದರು.

ಮಕ್ಕಳ ಸಾಹಿತಿ ವೈ.ಜಿ. ಭಗವತಿ ಬಾಬು ಜಗಜೀವನ್ ರಾಂ ಅವರ ಕುರಿತು ಉಪನ್ಯಾಸ ನೀಡಿದರು. ಬಾಬು ಜಗಜೀವನ್ ರಾಂ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಡೊಳ್ಳು, ಜಾಂಜ್‌, ಮಜಲು ಹಾಗೂ ವಿವಿಧ ವಾದ್ಯ ಮೇಳಗಳು ಭಾಗವಹಿಸಿದ್ದವು.

ADVERTISEMENT

ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆನವರ, ತಾಲ್ಲೂಕು ಪಂಚಾಯಿತಿ ಇಒ ಶಿವಪುತ್ರಪ್ಪ ಮಠಪತಿ, ತಾಲ್ಲೂಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಜೆ. ಯೋಗಪ್ಪನವರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಹೆಬ್ಬಳಿಮಠ, ಉಪಾಧ್ಯಕ್ಷೆ ಯಲ್ಲವ್ವ ಶಿಗ್ಲಿ, ಗಂಗಾಧರ ಗೌಳಿ, ರಮೇಶ ಸೋಲರಾಗೋಪ್ಪ, ಶಶಿಕುಮಾರ ಕಟ್ಟಿಮನಿ, ಮಂಜುನಾಥ ಮಾದರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.