ADVERTISEMENT

ಕರ್ನಾಟಕ ಸಂಭ್ರಮ; ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:55 IST
Last Updated 17 ಜೂನ್ 2024, 15:55 IST
ಕರ್ನಾಟಕ ಸಂಭ್ರಮ–50ರ ಜ್ಯೋತಿ ರಥಯಾತ್ರೆಯನ್ನು ಕಲಘಟಗಿಯ ಯುವ ಶಕ್ತಿ ವೃತ್ತದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯಿಂದ ಸ್ವಾಗತಿಸಲಾಯಿತು
ಕರ್ನಾಟಕ ಸಂಭ್ರಮ–50ರ ಜ್ಯೋತಿ ರಥಯಾತ್ರೆಯನ್ನು ಕಲಘಟಗಿಯ ಯುವ ಶಕ್ತಿ ವೃತ್ತದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯಿಂದ ಸ್ವಾಗತಿಸಲಾಯಿತು   

ಕಲಘಟಗಿ: ಕರ್ನಾಟಕ ಸಂಭ್ರಮ –50ರ ಜ್ಯೋತಿ ರಥಯಾತ್ರೆ ಕನ್ನಡ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ, ಕನ್ನಡ ಸಾಹಿತ್ಯ,ಇತಿಹಾಸ ನೆನಪಿಸುವಂತಹ ಮಹತ್ವದ ಕಾರ್ಯವಾಗಿದೆ ಎಂದು ತಾಲ್ಲೂಕು ಪಂಚಾಯತಿ ಇಒ ಪರಶುರಾಮ ಸಾವಂತ ಹೇಳಿದರು.

ಕರ್ನಾಟಕ ಸಂಭ್ರಮ– 50ರ ಅಂಗವಾಗಿ ಜ್ಯೋತಿ ರಥಯಾತ್ರೆ ಸೋಮವಾರ ಕಲಘಟಗಿ ಪಟ್ಟಣಕ್ಕೆ ಆಗಮಿಸುತ್ತಿದಂತೆ ಪಟ್ಟಣದ ಯುವ ಶಕ್ತಿ ವೃತ್ತದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯಿಂದ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.

ಪಟ್ಟಣದ ಆಂಜನೇಯ ವೃತ್ತ, ತಹಶೀಲ್ದಾರ್ ಕಚೇರಿ, ನ್ಯಾಯಾಲಯದ ಆವರಣ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಬಮ್ಮಿಗಟ್ಟಿ ಕ್ರಾಸ್ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ADVERTISEMENT

ಮೆರವಣಿಗೆಗೆ ಜಗ್ಗಲಗಿ ಮೇಳ, ಭಜನೆ, ಮಹಿಳೆಯರಿಂದ ಜಾಂಜು ಮಜಲು ಕಳೆ ತಂದವು.

ತಹಶೀಲ್ದಾರ್‌ ಯಲ್ಲಪ್ಪ ಗೋಣೆನ್ನವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿ.ಜಿ.ಅಂಗಡಿ, ಉಪ ತಹಶೀಲ್ದಾರ್‌ ಬಸವರಾಜ ಹೊಂಕನ್ನವರ, ಶರಣಪ್ಪ ಉಣಕಲ್ಲ, ಸಂಗಮೇಶ್ವರ ಗ್ರಾಮ ಪಂಚಾಯತಿ ಪಿಡಿಒ ಎ.ಎಚ್.ಮನಿಯಾರ, ವೃಷಭಬೇಂದ್ರೆ ಪಟ್ಟಣಶೆಟ್ಟಿ, ಬಸವರಾಜ ಕಡ್ಲಾಸ್ಕರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಐ.ವಿ.ಜವಳಿ, ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಮಕ್ಕಳ ಸಾಹಿತಿ ವೈ. ಜಿ.ಭಗವತಿ, ಕರ್ನಾಟಕ ರಕ್ಷಣಾ ವೇದಿಕೆಯ ಶಂಕರಗೌಡ ಭಾವಿಕಟ್ಟಿ, ಸಂಗ್ರಾಮ ಸೇನೆಯ ಸಾತಪ್ಪ ಕುಂಕೂರ, ಪರಮಾನಂದ ಒಡೆಯರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.