ADVERTISEMENT

ಕೀರ್ತನೆಗಳಲ್ಲಿ ಸರಳ ಸಂದೇಶ: ವೀರೇಶ ಮುಳುಗುಂದಮಠ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 15:38 IST
Last Updated 18 ನವೆಂಬರ್ 2024, 15:38 IST
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಕಲಘಟಗಿ ತಾಲ್ಲೂಕು ಆಡಳಿತದಿಂದ ಗೌರವಿಸಲಾಯಿತು
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಕಲಘಟಗಿ ತಾಲ್ಲೂಕು ಆಡಳಿತದಿಂದ ಗೌರವಿಸಲಾಯಿತು   

ಕಲಘಟಗಿ: ಕನಕದಾಸರು, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಮೌಢ್ಯ, ಜಾತೀಯತೆ ತೊಡೆದುಹಾಕಲು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕೀರ್ತನೆಗಳ ಮೂಲಕ ಸಂದೇಶ ನೀಡಿದ್ದಾರೆ ಎಂದು ತಾಲ್ಲೂಕು ತಹಶೀಲ್ದಾರ್ ವೀರೇಶ ಮುಳುಗುಂದಮಠ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಸೋಲಾರಗೊಪ್ಪ, ಶಿಕ್ಷಕ ಎನ್. ಚೇತನ್ ಮಾತನಾಡಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ಪರಶುರಾಮ ಸಾವಂತ, ಬಿಇಒ ಉಮಾದೇವಿ ಬಸಾಪುರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಪಾಲಕರ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಶಿವಾಜಪ್ಪ ವಾಗ್ಮುಡೆ, ಬಾಬು ಅಂಚಟಗೇರಿ, ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೆಕಾರ್, ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ಜಗದೀಶ ವಿರಕ್ತಮಠ, ವಿಜಯಲಕ್ಷ್ಮಿ ಆಡಿನವರ, ಐ.ಸಿ. ಗೋಕುಲ್, ಮಂಜುನಾಥ್ ದನಿಗೊಂಡ, ಪಿಎಸ್ಐ ಬಸವರಾಜ್ ಯಲ್ಲದಗುಡ್ಡ, ಅಶೋಕ ಆಡಿನವರ, ಕುಮಾರ್ ಕಂಡೆಕರ್, ಬೀರಪ್ಪ ಡೊಳ್ಳಿನ, ವಾಸು ಲಮಾಣಿ, ಯಲ್ಲಪ್ಪ ಕುಂದುಗೋಳ, ಚೇತನ್ ವಾಗ್ಮೊಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.