ADVERTISEMENT

ಆಶುಕವಿ ವಿ.ಸಿ.ಐರಸಂಗ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 5:04 IST
Last Updated 13 ನವೆಂಬರ್ 2020, 5:04 IST
ಕವಿ ವಿ.ಸಿ.ಐರಸಂಗ
ಕವಿ ವಿ.ಸಿ.ಐರಸಂಗ   

ಧಾರವಾಡ: ಆಶುಕವಿತೆಗಳ ಮೂಲಕವೇ ಚಿರಪರಿಚಿತರಾಗಿದ್ದ ಕವಿ ವಿ.ಸಿ.ಐರಸಂಗ (91) ಶುಕ್ರವಾರ ನಸುಕಿನಲ್ಲಿ ನಿಧನರಾದರು. ಅವರಿಗೆ ಮಗ ಹಾಗೂ ಮಗಳು ಇದ್ದಾರೆ.

ನೂರಾರು ಆಶುಕವಿತೆಗಳನ್ನು ಬರೆದಿರುವ ಅವರು, ಅವುಗಳನ್ನು ಪುಟ್ಟ ಪ್ಯಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ತಮ್ಮ ಸೈಕಲ್ ಮೇಲಿಟ್ಟು ಮಾರುತ್ತಿದ್ದರು. ಇವರ ಕವಿತೆಗಳನ್ನು ಧಾರವಾಡ ಆಕಾಶವಾಣಿ ಆಗಾಗ ಪ್ರಸಾರ ಮಾಡುತ್ತಲೇ ಇರುತ್ತಿತ್ತು.

ಅತ್ಯಂತ ಸರಳ ಜೀವಿಯಾಗಿದ್ದ ಇವರು ಇಳಿ ವಯಸ್ಸಿನಲ್ಲೂ ಮಲ್ಲಕಂಬಪಟುವಾಗಿದ್ದರು, ನಿತ್ಯ ಸೈಕಲ್ ಓಡಿಸುವುದು, ಈಜುವ ಹವ್ಯಾಸ ಹೊಂದಿದ್ದರು. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.

ADVERTISEMENT

ಐರಸಂಗರ ಮೃತ ಪಾರ್ಥಿವ ಶರೀರದ ಅಂತ್ಯಕ್ರಿಯೆ ಧಾರವಾಡದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಶುಕ್ರವಾರ 11.30ಕ್ಕೆ ಜರುಗಲಿದೆ ಅವರ ಪುತ್ರಿ ರತ್ನಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.