ADVERTISEMENT

ಉಪ್ಪಿನಬೆಟಗೇರಿ: ಸಂಭ್ರಮದ ಕಾರ ಹುಣ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:37 IST
Last Updated 22 ಜೂನ್ 2024, 15:37 IST
ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳ ಕರಿ ಹರಿಯಲಾಯಿತು
ಉಪ್ಪಿನಬೆಟಗೇರಿ ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳ ಕರಿ ಹರಿಯಲಾಯಿತು   

ಉಪ್ಪಿನಬೆಟಗೇರಿ: ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಕಾರ ಹುಣ್ಣಿಮೆ ಅಂಗವಾಗಿ ಅಗಸಿಯಲ್ಲಿ ಎತ್ತುಗಳ ಕರಿ ಹರಿಯಲಾಯಿತು.

ರೈತರು ಎತ್ತುಗಳನ್ನು ತೊಳೆದು ವಿವಿಧ ಬಣ್ಣಗಳಿಂದ ಸಿಂಗರಿಸಿದ್ದರು. ಕೋಡು ಮತ್ತು ಕುತ್ತಿಗೆ ಭಾಗದಲ್ಲಿ ಕಡುಬು, ಕೋಡಬಳೆ, ವಡೆ, ಕರಚಿಕಾಯಿ, ಶೇಂಗಾ, ಗಾರಿಗೆ, ಕೊಬ್ಬರಿ ಸೇರಿದಂತೆ ವಿವಿಧ ಪದಾರ್ಥಗಳನ್ನು ಕಟ್ಟಿದ್ದರು.

ಸಂಜೆ ಗ್ರಾಮದ ಅಗಸಿಯಲ್ಲಿ ಎತ್ತುಗಳನ್ನು ತಂದು ನಿಲ್ಲಿಸಲಾಯಿತು. ಹರಿಜನ ಕೇರಿ ಓಣಿಯ ಜನ ಎತ್ತುಗಳನ್ನು ಹಿಡಿದು ಅವುಗಳಿಗೆ ಹಾಕಿದ್ದ ಖಾದ್ಯಗಳನ್ನು ಹರಿದು ಕುಟುಂಬ ಸದಸ್ಯರ ಜತೆ ಸೇರಿ ತಿಂದರು.

ADVERTISEMENT

ಧರೇಪ್ಪ ಬೊಬ್ಬಿ, ಧರಣೇಂದ್ರ ದಿಂಡಲಕೊಪ್ಪ, ಶೇಖಪ್ಪ ಜಾಧವ, ನಾಗಪ್ಪ ಹುಗ್ಗಿ, ಶೇಕಪ್ಪ ಛಬ್ಬಿ, ವಿನೋದ ಕಾಗಿ, ನ್ಯಾಮಣ್ಣ ಛಬ್ಬಿ, ಹನುಮಂತ ಜಾಕೋಜಿ, ಬೀಮಸಿ ಛಬ್ಬಿ, ಧರಣೇಂದ್ರ ಅಷ್ಟಗಿ, ಶಂಕರ ಅರಳಿಕಟ್ಟಿ, ಆನಂದ ಬಡಿಗೇರ, ಅಶೋಕ ಹೊಸಮನಿ, ಶಿವಪ್ಪ ದೊಡಮನಿ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.