ಹುಬ್ಬಳ್ಳಿ: ‘ಪಕ್ಷಕ್ಕೆ ಸಂಬಂಧಿಸಿದ ನಿಲುವು ಬೇರೆ, ವೈಯಕ್ತಿಕ ಸಂಬಂಧ ಬೇರೆ...’ – ಬಿಜೆಪಿಯ ಹಿರಿಯ ನಾಯಕ ಜಗದೀಶ ಶೆಟ್ಟರ್ ಅವರು ಪಕ್ಷ ತೊರೆಯುವುದರ ಕುರಿತು, ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರ ಅಭಿಪ್ರಾಯವಿದು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಣ್ಣನ ಮನೆಗೆ ನಾನು ದಿನಾ ಹೋಗುತ್ತೇನೆ. ಊಟ ಮಾಡುತ್ತೇನೆ. ವೈಯಕ್ತಿಕ ಸಂಬಂಧ ಬೇರೆ, ಪಕ್ಷ ಬೇರೆ. ಇಷ್ಟಕ್ಕೂ ಅವರಿನ್ನೂ ಬಿಜೆಪಿಯಲ್ಲೇ ಇದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾನಂತೂ ಪಕ್ಷದಲ್ಲೇ ಇರುವೆ’ ಎಂದ ಸ್ಪಷ್ಟಪಡಿಸಿದರು.
‘ಅಣ್ಣನಿಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿದೆ. ಅಲ್ಲಿಗೆ ಹೋಗಬೇಕೇ ಬೇಡವೇ ಅಥವಾ ಪಕ್ಷೇತರವಾಗಿ ಸ್ಪರ್ಧಿಸಬೇಕೇ ಎಂಬುದು ಅವರಿಗೆ ಬಿಟ್ಟ ನಿರ್ಧಾರ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.