ADVERTISEMENT

ಮಂಗಳೂರಿನ ಎಸ್‌‌ಡಿಎಂ ಕಾನೂನು ಕಾಲೇಜು ಚಾಂಪಿಯನ್

ಅಂತರ ವಲಯ ಯುವಜನೋತ್ಸವ–2024: ಹುಬ್ಬಳ್ಳಿಯ ಕೆಎಸ್‌‌ಎಲ್‌‌ಯು ಹಾಗೂ ಬೆಳಗಾವಿಯ ಬಿ.ವಿ.ಬೆಲ್ಲದ ಕಾಲೇಜು ರನ್ನರ್‌ಅಪ್

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 5:24 IST
Last Updated 14 ಆಗಸ್ಟ್ 2024, 5:24 IST
ಹುಬ್ಬಳ್ಳಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರ ವಲಯ ಯುವಜನೋತ್ಸವದಲ್ಲಿ ಮಂಗಳೂರಿನ ಎಸ್‌‌ಡಿಎಂ ಕಾನೂನು ಕಾಲೇಜು ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆಯಿತು
ಹುಬ್ಬಳ್ಳಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರ ವಲಯ ಯುವಜನೋತ್ಸವದಲ್ಲಿ ಮಂಗಳೂರಿನ ಎಸ್‌‌ಡಿಎಂ ಕಾನೂನು ಕಾಲೇಜು ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆಯಿತು   

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಎಲ್‌ಯು) ಹಮ್ಮಿಕೊಂಡಿದ್ದ ‘ಅಂತರ ವಲಯ ಯುವಜನೋತ್ಸವ–2024’ದಲ್ಲಿ ಮಂಗಳೂರಿನ ಎಸ್‌‌ಡಿಎಂ ಕಾನೂನು ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. 

ಹುಬ್ಬಳ್ಳಿಯ ಕೆಎಸ್‌‌ಎಲ್‌‌ಯು ಕಾನೂನು ಶಾಲೆ ಮತ್ತು ಬೆಳಗಾವಿಯ ಕೆಎಲ್‌‌ಇ ಬಿ.ವಿ.ಬೆಲ್ಲದ ಕಾನೂನು ಕಾಲೇಜು ರನ್ನರ್ ಅಪ್ ಪ್ರಶಸ್ತಿ ಹಂಚಿಕೊಂಡವು. ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಒಟ್ಟು 13 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ರಾಜ್ಯದ 35 ಕಾನೂನು ವಿದ್ಯಾಲಯಗಳ 210 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜೇತರ ಪಟ್ಟಿ: 

ADVERTISEMENT

13 ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರ ಹೆಸರು ಕ್ರಮವಾಗಿ ಈ ಕೆಳಗಿನಂತಿದೆ.
ಹಿಂದೂಸ್ತಾನಿ ಶಾಸ್ತ್ರೀಯ ಗಾಯನ: ವೆಂಕಟ ಯಶಸ್ವಿ ಕೆ.(ಎಸ್‌‌ಡಿಎಂ ಕಾನೂನು ಕಾಲೇಜು, ಮಂಗಳೂರು), ಕೇದಾರ್ ವೈಂಗಾಕರ್ (ಕೆಎಸ್‌‌ಎಲ್‌‌ಯು ಕಾನೂನು ಶಾಲೆ, ಹುಬ್ಬಳ್ಳಿ)
ಲಘು ಸಂಗೀತ: ಗಾಯತ್ರಿ (ವಿವೇಕಾನಂದ ಕಾಲೇಜು ಪುತ್ತೂರು), ಸ್ನೇಹಾ ಕುಲಕರ್ಣಿ (ಆರ್‌.ಎಲ್. ಕಾನೂನು ಕಾಲೇಜು ಬೆಳಗಾವಿ)
ಗುಂಪು ಹಾಡುಗಾರಿಕೆ: ಕೆಎಸ್ಎಲ್‌‌ಯು ಕಾನೂನು ಶಾಲೆ, ಹುಬ್ಬಳ್ಳಿ. ಎಸ್‌‌ಡಿಎಂ ಕಾನೂನು ಕಾಲೇಜು, ಮಂಗಳೂರು
ಶಾಸ್ತ್ರೀಯ ನೃತ್ಯ: ಮಾಳವಿಕಾ (ಎಸ್‌.ಇ.ಎ ಕಾನೂನು ಕಾಲೇಜು ಬೆಂಗಳೂರು), ಸಂಜನಾ ಪತ್ತಾರ (ಆರ್‌.ಎಲ್. ಕಾನೂನು ಕಾಲೇಜು ಬೆಳಗಾವಿ)
ಶಾಸ್ತ್ರೀಯ/ ಜಾನಪದ ನೃತ್ಯ: ಕೆಎಸ್‌‌ಎಲ್‌‌ಯು ಕಾನೂನು ಶಾಲೆ, ಹುಬ್ಬಳ್ಳಿ. ವೈಕುಂಠ ಬಾಳಿಗಾ ಕಾನೂನು ಕಾಲೇಜು, ಉಡುಪಿ.
ಜಾನಪದ ವಾದ್ಯಗೋಷ್ಠಿ: ಎಸ್‌‌ಡಿಎಂ ಕಾನೂನು ಕಾಲೇಜು, ಮಂಗಳೂರು. ಬಸವಶ್ರೀ ಕಾನೂನು ಕಾಲೇಜು, ಕೋಲಾರ
ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ: ಶರತ್ (ವೈಕುಂಠ ಬಾಳಿಗಾ ಕಾನೂನು ಕಾಲೇಜು, ಉಡುಪಿ), ಶಾಂತಾ ಗೌಡರ (ಕೆ.ಎಲ್‌.ಇ ಕಾನೂನು ಕಾಲೇಜು ಚಿಕ್ಕೋಡಿ)
ರಂಗೋಲಿ: ರಂಜಿತಾ ಎಸ್‌. (ಸೌಂದರ್ಯ ಕಾನೂನು ಕಾಲೇಜು, ಬೆಂಗಳೂರು), ಪ್ರೇರಣಾ ಗಾಣಿಗೇರ (ಕೆಎಸ್ಎಲ್‌‌ಯು ಕಾನೂನು ಶಾಲೆ, ಹುಬ್ಬಳ್ಳಿ) ಹಾಗೂ ಕವನಾ ಡಿ.ಎಂ (ಸರ್ಕಾರಿ ಕಾನೂನು ಕಾಲೇಜು ಹಾಸನ)
ಮಾತುಗಾರಿಕೆ: ಬಸವರಾಜ ಕಮತೆ (ಕೆಎಲ್‌‌ಇ ಬಿ.ವಿ.ಬೆಲ್ಲದ ಕಾನೂನು ಕಾಲೇಜು, ಬೆಳಗಾವಿ). ವಾಸುದೇವ ತಿಲಕ್ (ವೈಕುಂಠ ಬಾಳಿಗಾ ಕಾನೂನು ಕಾಲೇಜು, ಉಡುಪಿ)
ಚರ್ಚಾಸ್ಪರ್ಧೆ: ಬಸವರಾಜ ಕಮತೆ ಹಾಗೂ ಮುಜಾಹಿದ್ ಖಾಜಿ  (ಕೆಎಲ್‌‌ಇ ಬಿ.ವಿ.ಬೆಲ್ಲದ ಕಾನೂನು ಕಾಲೇಜು, ಬೆಳಗಾವಿ) ಭಾರ್ಗವಿ ಹಾಗೂ ಲತೇಶ (ಎಸ್‌‌ಡಿಎಂ ಕಾನೂನು ಕಾಲೇಜು, ಮಂಗಳೂರು)
ವ್ಯಂಗ್ಯಚಿತ್ರ: ವಿನಾಯಕ ಸೊಂಟಕ್ಕಿ (ಕೆಎಲ್‌‌ಇ ಬಿ.ವಿ.ಬೆಲ್ಲದ ಕಾನೂನು ಕಾಲೇಜು, ಬೆಳಗಾವಿ), ಸಾತ್ವಿಕಾ ಜೆ. (ಎಸ್‌‌ಡಿಎಂ ಕಾನೂನು ಕಾಲೇಜು, ಮಂಗಳೂರು) ಹಾಗೂ ಸ್ವಾತಿ ಎ.ಎಂ (ಬಸವಶ್ರೀ ಕಾನೂನು ಕಾಲೇಜು, ಕೋಲಾರ)
ನಾಟಕ: ಸರಸ್ವತಿ ಕಾನೂನು ಕಾಲೇಜು, ಚಿತ್ರದುರ್ಗ. ವಿವೇಕಾನಂದ ಕಾನೂನು ಕಾಲೇಜು, ಪುತ್ತೂರು 
ಮಿಮಿಕ್ರಿ: ಗಿಂಡಿ ಗುಡಪ್ಪ (ಸರಸ್ವತಿ ಕಾನೂನು ಕಾಲೇಜು, ಚಿತ್ರದುರ್ಗ), ಜಯಂತಕುಮಾರ್ ಸಿ.ಆರ್. (ಎಸ್‌.ಜೆ.ಆರ್ ಕಾನೂನು ಕಾಲೇಜು, ಬೆಂಗಳೂರು).

ವಿಜೇತರಿಗೆ ಶಿಗ್ಗಾವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಬಸವರಾಜು ಪ್ರಶಸ್ತಿ ವಿತರಿಸಿದರು.

ಜಾನಪದ ತಜ್ಞ ರಾಮು ಮೂಲಗಿ, ಸಿಂಡಿಕೇಟ್ ಸದಸ್ಯರಾದ ಎಚ್‌.ವಿ. ಬೆಳಗಲಿ, ಮೋಹನ್ ಭಜಂತ್ರಿ, ಬಿ.ಜಿ. ರವಿಕುಮಾರ, ಕುಲಸಚಿವರಾದ ಅನುರಾಧಾ ವಸ್ತ್ರದ, ರತ್ನಾ ಭರಮಗೌಡರ (ಮೌಲ್ಯಮಾಪನ), ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಪ್ರಭಾರ ನಿರ್ದೇಶಕ ಗಿರೀಶ ಕೆ.ಸಿ, ಪ್ರೊ. ಶೋಭಾ ಹೂಗಾರ, ಪ್ರೊ. ಪಾರ್ವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.