ADVERTISEMENT

ಕೆಎಲ್‌ಇ ತಾಂತ್ರಿಕ ವಿ.ವಿಗೆ 25ರೊಳಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 11:35 IST
Last Updated 25 ಆಗಸ್ಟ್ 2020, 11:35 IST
ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯ
ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯ   

ಹುಬ್ಬಳ್ಳಿ: ಆವಿಷ್ಕಾರ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ಅಟಲ್‌ ರ‍್ಯಾಂಕಿಂಗ್‌ನಲ್ಲಿ ಕೆ.ಎಲ್‌.ಇ ತಾಂತ್ರಿಕ ವಿಶ್ವವಿದ್ಯಾಲಯ 6ರಿಂದ 25ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಕೆಎಲ್‌ಇ ಈ ಸಾಧನೆ ಮಾಡಿದೆ.

ಇದೇ ವಿಭಾಗದಲ್ಲಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಮತ್ತು ರೇವಾ ವಿಶ್ವವಿದ್ಯಾಲಯಗಳು ಸ್ಥಾನ ಪಡೆದುಕೊಂಡಿವೆ. ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ವಿಭಾಗದಲ್ಲಿ ಕಲಬುರ್ಗಿಯ ಎಚ್‌.ಕೆ.ಇ ಸೊಸೈಟಿಯ ಪಿ.ಡಿ.ಎ ಎಂಜಿನಿಯರಿಂಗ್‌ ಕಾಲೇಜು 6ರಿಂದ 25ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ‘ಕೆಎಲ್‌ಇ ಸಂಸ್ಥೆ ಯಾವಾಗಲೂ ಅನ್ವೇಷಣೆಗಳಿಗೆ ಒತ್ತು ಕೊಡುತ್ತಲೇ ಬಂದಿದೆ. ಅನ್ವೇಷಣೆ, ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆ, ಹೊಂದಿರುವ ಸೌಲಭ್ಯ, ಸಂಶೋಧನೆಗಳ ವಿಷಯದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಸ್ಥಾನಗಳನ್ನು ನೀಡುತ್ತದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಅನ್ವೇಷಣೆಗಳನ್ನು ಮಾಡಲು ಈಗಿನ ಗೌರವ ಪ್ರೇರಣೆಯಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.